ಉಪಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಗೊಂದಲ ಬಗೆಹರಿದಿಲ್ಲ. ಈ ಹಿನ್ನಲೆ ರಾಜರಾಜೇಶ್ವರಿ ನಗರಕ್ಕೆ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ. ಈ ಹಿನ್ನಲೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್ಗೆ ವಹಿಸಲಾಗಿದೆ.
ರಾಜಾರಾಜೇಶ್ವರಿ ನಗರಕ್ಕೆ ಆಪರೇಷನ್ ಕಮಲದ ಮೂಲಕ ಬಂದಿರುವ ಮುನಿರತ್ನಗೆ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಸಿಎಂ ಬಿಎಸ್ವೈ ಮಾತು ನೀಡಿದ್ದಾರೆ. ಈ ಹಿನ್ನಲೆ ನನಗೆ ಟಿಕೆಟ್ ಸಿಗಬೇಕು ಎಂದು ಮುನಿರತ್ನ ತಿಳಿಸಿದ್ದರು. ಆದರೆ, ಅಂತಿಮ ತೀರ್ಮಾನ ಪಕ್ಷದ್ದೆ ಎನ್ನುವ ಮೂಲಕ ಈ ಹಿಂದೆ ಪಕ್ಷ ಸ್ಥಾಪನೆಗೆ ನೆರವಾಗಿದ್ದನ್ನು ಸೂಚ್ಯವಾಗಿ ತಿಳಿಸಿದ್ದರು. ಇನ್ನು ತುಳಸಿ ಮುನಿರಾಜುಗೌಡ ಮೊದಲಿನಿಂದಲೂ ಇಲ್ಲಿ ಬಿಜೆಪಿ ಪರ ಕಣಕ್ಕೆ ಇಳಿದಿದ್ದು, ಈ ಬಾರಿಯೂ ತಾನು ಪ್ರಬಲ ಆಕಾಂಕ್ಷಿ ಎಂದು ಸ್ಥಾನ ತ್ಯಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಯಾರಿಗೆ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಅಂತಿಮ ಒಮ್ಮತ ಸಾಧ್ಯವಾಗದ ಹಿನ್ನಲೆ ಇಬ್ಬರ ಹೆಸರನ್ನು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ.
