ಬೆಂಗಳೂರು : ಜಾನುವಾರು ಹತ್ಯೆ ನಿಷೇಧ ಮಸೂದೆ ಜಾರಿಯಿಂದ ದೇಶದ ಚರ್ಮೋಧ್ಯಮಕ್ಕೆ ಹೊಡೆತ ಬೀಳಲಿದೆ – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್.
ಜಾನುವಾರು ಹತ್ಯೆ ನಿಷೇಧ ಮಸೂದೆ ಜಾರಿಯಿಂದ ದೇಶದ ಚರ್ಮೋಧ್ಯಮಕ್ಕೆ ಹೊಡೆತ ಬೀಳಲಿದೆ. ಜಗತ್ತಿನ 11% ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಈಗ ಇಡೀ ಉದ್ಯಮ ಮುಚ್ಚುವ ಸ್ಥಿತಿ ತಲುಪಲಿದೆ. ಈ ಮಸೂದೆಯಿಂದ ಉದ್ಯೋಗ, ವ್ಯವಹಾರ ಕಳೆದುಕೊಳ್ಳುವವರಿಗೆ ಸರ್ಕಾರ ರೂಪಿಸಿದ ಪರ್ಯಾಯ ವ್ಯವಸ್ಥೆ, ರೂಪಿಸಿದ ಯೋಜನೆಗಳೇನು?
ಜಾನುವಾರು ಹತ್ಯೆ ನಿಷೇಧ ಕಾಯಿದೆ ಜಾರಿಯಿಂದ ರಾಜ್ಯದ ಎಲ್ಲಾ ವರ್ಗದ ಜನರು, ವಿಶೇಷವಾಗಿ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷ ಪ್ರತಿ ತಾಲೂಕುಗಳಲ್ಲಿ ಈ ಕುರಿತು ಜನ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಿದೆ.
ಜಾನುವಾರು ಖರೀದಿಸಲು, ಮಾರಾಟ ಮಾಡಲು ಸರ್ಕಾರವೇ ಒಂದು ಬೆಲೆ ನಿಗದಿ ಮಾಡಿದೆ. ಆ ಬೆಲೆಯನ್ನು ಬಿಜೆಪಿ ನಾಯಕರು ತಾವೇ ಕೊಟ್ಟು ಅನುತ್ಪಾದಕ ಜಾನುವಾರುಗಳನ್ನು ಖರೀದಿಸಲಿ. ಅವುಗಳನ್ನು ಬಿಜೆಪಿ ಸಚಿವರು, ಶಾಸಕರು, ನಾಯಕರು ತಮ್ಮ ಮನೆ, ಜಮೀನಿನಲ್ಲಿ ಇಟ್ಟು ಸಾಕಲಿ – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್.
ವರದಿ: ಸಿಸಿಲ್ ಸೋಮನ್