ಬೆಂಗಳೂರು: ದೇಶ ಸುತ್ತಬೇಕು-ಕೋಶ ಓದಬೇಕ ಎನ್ನುವ ಮಾತುಗಳು ಶತಮಾನಗಳಿಂದ ವಾಡಿಕೆಯಲ್ಲಿರೋ ಅಂತದ್ದು.

ಸಧ್ಯದ ಪರಿಸ್ಥಿತಿಯಲ್ಲಿ ನೂರಾರು ಪುಸ್ತಕಗಳನ್ನ ಓದಬಹುದು ಆದ್ರೆ ದೇಶ ವಿದೇಶಗಳ ಸುತ್ತೋದು ಇಷ್ಟಾ ಆದ್ರೂ ಕೊಂಚ ಕ್ಲಿಷ್ಟ. ಜಗಿತ್ತಿನ ಎಲ್ಲಾ ದೇಶಗಳು ಕೋವಿಡ್ 19 ಸಾಂಕ್ರಾಮಿವನ್ನ ತಡೆ ಹಿಡಿಯಲು ಹಲವು ನಿರ್ಭ0ಧಗಳನ್ನ ಹೇರಿದವು, ಅವುಗಳಲ್ಲಿ ಪ್ರಮುಖವಾಗಿ ಎಲ್ಲರೂ ಒಮ್ಮತವಾಗಿ ಪಾಲಿಸಿದ್ದು “ನಾಗರೀಕರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವುದರ ಮೇಲೆ ನಿಷೇಧಾಜ್ಞೆ”, ಅದರ ಪರಿಣಾಮ ಇಂದು ಅಂತಾರಾಷ್ಟ್ರ ಪ್ರವಾಸೋದ್ಯಮ ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಕೇಂದ್ರ ಸರ್ಕಾರ ಲಾಕ್ಡೌನ್ ನಿಯಮಗಳನ್ನ ನಿಧಾನವಾಗಿ ಸರಳೀಕರಿಸಿದ ಬಳಿಕ ನೆಲ ಕಚ್ಚಿದ್ದ ನೂರಾರು ವಿವಧ ಉದ್ಯಮಗಳಲ್ಲಿ ಚೇತರಿಕೆ ಕಂಡು ಬಂದಿದೆ ಪ್ರವಾಸೋದ್ಯಮವೊಂದನ್ನ ಬಿಟ್ಟು.ನಮ್ಮ ದೇಶದ ಒಳಗೆ ಯಾರು ಯಾವ ಸ್ಥಳಕ್ಕೆ, ಯಾವ ಮೂಲೆಗೆ ಬೇಕಾದ್ರು ಪ್ರಯಾಣ ಪ್ರಾವಾಸ , ಪ್ರವಾಸ ಸಾಗಿಸಬಹುದು ಯಾವುದೇ ಶರತ್ತುಗಳಿಲ್ಲ, ಹಾಗೆಯೇ ಅಂತಾರಾಷ್ಟ್ರೀಯ ಪ್ರವಾಸಿಗರು ಇಲ್ಲಿ ಬರುವಂತಿಲ್ಲ ಹಾಗೂ ಇಲ್ಲಿನವರು ಯಾವುದೇ ವಿದೇಶ ಪ್ರವಾಸ ಮಾಡುವಂತಿಲ್ಲ. ಪ್ರವಾಸೋದ್ಯಮ ಐಷಾರಾಮಿ ಜಗತ್ತು ಅದರ ಚಿಂತೆ ನಮಗ್ಯಾಕೆ ಅಂತ ಅನ್ನಿಸಬಹುದು, ಆದ್ರೆ ಅದರಲ್ಲಿ ಕೆಲಸ ಮಾಡುತ್ತಿರುವ ವಿವಿಧ ಆರ್ಥಿಕ ವರ್ಗದ ಲಕ್ಷಾಂತರ ಕಾರ್ಮಿಕರ ಕೈ ಕಟ್ಟುಹಾಕಿ ಬೀಗ ಜಡಿದಂತಾಗಿದೆ. ಭಾರತದ ಐತಿಹಾಸಿಕ ಪ್ರಸಿದ್ಧ ಕ್ಷೇತ್ರಗಳಾದ ಕೆಲುವಾದ ಹಂಪೆ, ಬೇಲೂರು, ಹಳೇಬೀಡು, ಅಜಂತಾ,ಎಲ್ಲೋರ, ಆಗ್ರಾ, ಖುಜರಾವೊ, ಚಿದಂಬರಂ, ದ್ವಾರಕಾ ಮತ್ತು ರಾಜಾಸ್ಥಾನದ ಕೋಟೆ ಮಹಲ್ಗಳು ವರ್ಷವಿಡೀ ಲಕ್ಷಾಂತರ ವಿದೇಶಿ ಪ್ರವಾಸಿಗರನ್ನ ಸೆಳೆಯುತ್ತಿತ್ತು, ಆದ ಕಾರಣ ಸ್ಟಾರ್ ಹೋಟೆಲ್ ಉದ್ಯಮಕ್ಕೆ, ಟ್ರಾವೆಲ್ ಇಂಡಸ್ಟ್ರಿ, ಸ್ಥಳೀಯ ಉದ್ಯಮಿಗಳಿಗೆ,ಹಮಾಲಿಗಳು, ಸರ್ಕಾರಿ ಗೈಡ್ಗಳ ಜೀವನೋಪಾಯಕ್ಕೆ ಆದಾಯಕ್ಕೆ ವಿದೇಶಿ ಪ್ರಾವಾಸಿಗರ ಉಪಸ್ಥಿತಿ ಕಾರಣವಾಗಿತ್ತು, ಸಧ್ಯದ ಪರಿಸ್ತಿಥಿಯಿಂದಾಗಿ ಎಲ್ಲವೂ ಇಳಿಮುಖವಾಗಿದೆ.
ಇನ್ನು ಆಗಸ್ಟ್ ತಿಂಗಳು ಪ್ರಾರಂಭವಾಯ್ತು ಅಂದ್ರೆ ಸಾಕು ಇಲ್ಲಿನ ಕೋಟ್ಯಾನು ಮಂದಿ ಟ್ರಿಪ್ ಹೆಸರಲ್ಲಿ ಇತರೆ ರಾಷ್ಟ್ರಗಳಿಗೆ ಭೇಟಿ ನೀಡಿ ಬರುವುದು ಸರ್ವೇ ಸಾಮಾನ್ಯಯವಾದ ಪ್ರಸಂಗ. ನಮ್ಮ ವಿದೇಶದ ವಿಹಾರ ಸುಗಮವಾಗಿ ಸಾಗಲು
ಇಲ್ಲಿಯ ಟ್ರಿಪ್ ಅದ್ವೈಸರ್ಸ್,ಟೂರ್ ಕನ್ಸಲ್ಟೆಂಟ್ಸಗಳು ನಮ್ಮ ಪಾಸ್ಪೋರ್ಟ್, ವೀಸಾ, ಟಿಕೆಟ್ಸ್ ಮೊದಲುಗೊಂಡು ಅಲ್ಲಿ ನಾವು ಸೇವಿಸುವ ಆಹಾರ, ತಂಗುವ ಜಾಗದ ಏರ್ಪಾಡುಗಳನ್ನ ವ್ಯವಸ್ಥಿತವಾಗಿ ನಿಭಾಯಿಸಿಲು ಕರಾಣವಾಗಿರ್ತಾರೆ,ನಮಗೆ ತಿಳಿಯದ ಹಲವು ಕಾಣದ ಕೈಗಳ ಶ್ರಮಿವಿರುತ್ತದೆ. 20 ಲಕ್ಷಕ್ಕೂ ಹೆಚ್ಚಿಗೆ ಜನ ತಿಂಗಳ ಸಂಬಳಕ್ಕಾಗಿ(15,000-60,000) ಈ ಉದ್ಯಮದಲ್ಲಿ ದುಡಿಯುತ್ತಿದ್ದರು, ಈಗ ಶೇಕಡ 80ರಷ್ಟು ಜನ ಕೆಲಸವಿಲ್ಲದೆ ಕುಳಿತ್ತಿದ್ದಾರೆ ಅನ್ನೋದು ಕಟು ಸತ್ಯ. 50 ಸಾವಿರ ಕೋಟಿ ವಹಿವಾಟು,15 ಸಾವಿರ ಮಂದಿ ಕೆಲಸ ಮಾಡುತ್ತಿದ್ದ ಕಂಪನಿಗಳು ಇಂದು ಮುಚ್ಚುವ ಪರಿಸ್ಥಿತಿಗೆ ತಲುಪಿದೆ ಅನ್ನೋದು ಬೇಜಾರಿನ ಸಂಗತಿ. ನಮ್ಮ ನಗು- ಸಂತೋಶದ ಆಯಾಮವನ್ನು ಬೃಹದಾಕಾರವಾಗಿಸಿ ಅದನ್ನ ಗಗನದಲ್ಲಿ ತೇಲುವಂತೆ ಮಾಡಿದವರಿಗೆ ಇಂದು ಎಲೆಮರೆ ಕಾಯಾಗಿಹೋಗಿ ಸಂಕಷ್ಟದಲ್ಲಿ ಸಿಲುಕಿಹರು. ದುಬೈ ಮತ್ತು ಮಾಲ್ಡಿವ್ಸ್ ದ್ವೀಪ ಭಾರತೀಯ ಪ್ರಾವಿಸಿಗರಿಗೆ ತನ್ನತ್ತ ಬರಲು ಗ್ರೀನ್ ಸಿಗ್ನಲ್ ನೀಡಿದ್ದರು “ಭಯ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತಿದೆ”. ದುರ್ದೈವವೆಂದರೆ ಇದಕ್ಕೆಲ್ಲಾ ಪರ್ಯಾಯಮಾರ್ಗವೂ ಇಲ್ಲಾ , ಪರಿಹಾರವೂ ಇಲ್ಲಾ.
ಸಮಯ ಎಲ್ಲದಕ್ಕೂ ಉತ್ತರ ಕೊಡಲಿದೆ ನಿಜ, ಪ್ರಸ್ತುತ ಯುರೋಪ್, ಆಸ್ಟ್ರೇಲಿಯಾ,ಸಿಂಗಪೂರ್, ಅಮೇರಿಕಾ ದೇಶಗಳಲ್ಲಿ ರಣ ಕೇಕೆ ಹಾಕುತ್ತಿರುವ ಅನಿಯಂತ್ರಿತ ಸೋಂಕಿನ ವಾತಾವರ್ಣ ಅಲ್ಲಿಯವರಿಗೆ ಅಕ್ಷರಶಃ ಚಿಂತಾಜನಕವಾಗಿದೆ..ಇನ್ನು ಉಲ್ಲಾಸ ಭರಿತ ಪ್ರಯಾಣ ಮರೀಚಿಕೆಯಿಂದ ನೀರು ತೆಗೆದು ದಾಹ ತೀರಿಸಿಕೊಂಡಂತೆ.

ವರದಿ: P. ಘನಶ್ಯಾಮ್ – ಬೆಂಗಳೂರು

