ನೂತನ ಕೃಷಿ ಮಸೂದೆ ವಿರೋಧಿಸಿ ಅಕಾಲಿದಳ ನಿನ್ನೆ ಕಿಸಾನ್ ಮಾರ್ಚ್ ಎಂಬ ಹೆಸರಿನಲ್ಲಿ ಮೂರು ಮೆರವಣಿಗೆ ನಡೆಸಿತ್ತು. ಅಕಾಲಿದಳ ಮುಖ್ಯಸ್ಥ ಸುಖ್ಭೀರ್ ಸಿಂಗ್ ಬಾದಲ್ ನೇತೃತ್ವದ ತಂಡ ಅಮೃತ್ಸರದಿಂದ ಈ ಮೆರವಣಿಗೆ ಆರಂಭಿಸಿತು. ಎರಡನೇ ಮೆರವಣಿಗೆಯನ್ನು, ಅಮೃತ್ಸರದಿಂದ ಹರ್ಸೀಮ್ರತ್ ಕೌರ್ ನಡೆಸಿದರೆ ಮೂರನೇ ಮೆರವಣಿಗೆ ನೇತೃತ್ವವನ್ನು ಪ್ರೇಮ್ ಸಿಂಗ್ ವಹಿಸಿದ್ದರು. ವಿವಿಧ ಸ್ಥಳಗಳಿಂದ ಆರಂಭವಾದ ಈ ಮಸೂದೆ ಚಂಡೀಗಢದಲ್ಲಿ ಸೇರಬೇಕಿತ್ತು. ಬಳಿಕ ಮೂವರು ನಾಯಕರು ಪಂಜಾಬ್ ರಾಜ್ಯಪಾಲರಿಗೆ ಕೃಷಿ ಮಸೂದೆ ವಿರೋಧಿಸಿ ಪತ್ರ ನೀಡಲು ತೀರ್ಮಾನಿಸಿದ್ದರು.
ಈ ವೇಳೆ ಹರ್ಸಿಮ್ರತ್ ಕೌರ್ ಬಾದಲ್ ಅವರನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ಹಳೆ ಮೈತ್ರಿ ಪಕ್ಷವಾಗಿದ್ದ ಅಕಾಲಿದಳ ಕೃಷಿ ಮಸೂದೆ ವಿರೋಧಿಸಿ, ಎನ್ಡಿಎ ಒಕ್ಕೂಟ ತೊರೆದು ಬಂದಿದೆ.
