ಬೆಂಗಳೂರು: ಆಕಾಶದಲ್ಲಿ ಕೊಟೆ ಕಟ್ಟಿ ಅಂತರ್ಜಾಲನ ಭೂಮಿಗೆ ಕೊಟ್ಟ.
“ಸ್ಪೇಸ್ ಎಕ್ಸ್ ” ಅಂತರಿಕ್ಷ ಸಂಶೋಧನಾ ಕೇಂದ್ರದ ಸಂಸ್ಥಾಪಕ, ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ತನ್ನದೆಯಾದ ವಿಭಿನ್ನ ಸೂತ್ರಗಳಿಂದ ಇಡೀ ಜಗತ್ತಿನ ಆಯಾಮವನ್ನೇ ಬದಲಿಸಲು ಪಣ ತೊಟ್ಟಿರುವ ವಿಜ್ಞಾನಿ, ಉದ್ಯಮಿ ” ಈಲಾನ್ ಮಸ್ಕ್” ಮತ್ತೊಂದು ಬೃಹತ್ ಯೋಜನೆಯಲ್ಲಿ ನಿರತರಾಗಿದ್ದಾರೆ.
ಆಂತರಿಕ ಬಿಕ್ಕಟ್ಟಿನಿಂದ ಉಂಟಾಗುವ ತೋ೦ದರೆ ಪರಿಣಾಮಕ್ಕಿಂತ, ಅಂತರಜಾಲದ(internet) ಅನುಪಸ್ಥಿತಿಯಿಂದ ಎದುರಾಗುವ ಅವಸ್ಥಯೆ ದೊಡ್ಡದು.

ಕೊಂಡ ಕಾಲು ಕೆಜಿ ಕುಂಬಳಕಾಯಿಗೆ ಹಣ ನೀಡುವುದಕ್ಕೆ, ವಿದ್ಯಾರ್ಥಿಗಳು ಪಾಠವನ್ನ ಮನೆಯಲ್ಲಿಯೇ ಕುಳಿತು ಕಲಿಯಲಿಕ್ಕೆ, ಮನೋರಂಜನೆಗೆ, ಸಂಪರ್ಕಕ್ಕೆ ಹಾಗೂ ವಿದ್ಯಮಾನದ ಅರಿವೆಗಿ ಎಲ್ಲಾ ವ್ಯವಹಾರಕ್ಕೆ ಅಂತರ್ಜಾಲದ ಮೇಲೆ ಪರಾವಲಂಬಿಯಾಗಿದ್ದಿವಿ. ಚಲಿಸುವ ವಾಹನದ ವೇಗೆ ಕಡಿಮೆಯಾದರೂ ಸಹಿಸಿಕೊಳ್ಳಬಹುದು ಆದ್ರೆ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗಿ ಸತಾಯಿಸಿದ್ರೆ , ಎಂತಹವರಾದ್ರು ಸಹನೆ ಕಳೆದುಕೊಳ್ಳೋದು ಸಹಜ, ಯಾಕಂದ್ರೆ ಕಾರ್ಯವೈಖರಿಯು ಏರುಪೇರಾಗುವುದು.
3G ಯಿಂದ 4Gಗೆ ತಂತ್ರಜ್ಞಾನ ಬದಲಾಗಿ ಇದೀಗ 5G ಕೂಡ ಬರಲಿದ್ದು ಜನರಿಗೆ ಇದು ಒಳ್ಳೆಯ ಸೌಕರ್ಯವೇನೋ ಸರಿ ಆದ್ರೆ ಇದರ ಪೂರ್ಣ ಬಳಕೆಯಾಗ್ಲಿ ಅಥವ ಉಪಯೋಗವಾಗಲಿ ದೇಶದಾದ್ಯಂತ ಇನ್ನೂ ಲಭಿಸಿಲ್ಲ ಅನ್ನೋದೆ ಸಂಗತಿ. “ಇಂಟರ್ನೆಟ್ನ ಜೀವಾಳವೇ ಉಪಗ್ರಹಗಳು”.
I.S.R.O ಸಂಸ್ಥೆಯು ಇನ್ಸಾಟ್ 2E, G ಸಾಟ್ ಅನ್ನೋ ಹತ್ತಾರು ಕಮ್ಯುನಿಕೇಶನ್ ಉಪಗ್ರಹಗಳ ಉಡಾವಣೆ ಮಾಡಿ ಆಕಾಶದಲ್ಲಿ ತಂತ್ರಜ್ಞಾನದ ಕೋಟೆ ಕಟ್ಟಿದೆ.
ತಂತ್ರಜ್ಞಾನ ಲೋಕದಲ್ಲಿ ತನ್ನ ಆವಿಷ್ಕಾರಗಳಿಂದ ಪದೆ ಪದೇ ಬೆರಗು ಅಚ್ಚರಿಯನ್ನ ಮೂಡ್ಡಿಸುತ್ತಿರುವ ಎಲಾನ್ ಮಸ್ಕ್ , ಪ್ರಪಂಚದಾದ್ಯಂತ ಎಲ್ಲರೂ ಅಂದ್ರೆ ಸಾಮಾನ್ಯನು ಕೂಡ ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಪಡೆಯಬೇಕೆಂಬ ಉದ್ದೇಶದಿಂದ ಒಮ್ಮೆಲೆ 400 ಉಪಗ್ರಹಗಳನ್ನು (ಸಾಟಿಲೈಟ್) ಉಡಾಯಿಸಿದ್ದಾರೆ, ಮುತ್ತಿನ ಮಾಲೆಯಂತೆ ಆಕಾಶದಲ್ಲಿ ಉಪಗ್ರಹಗಳು ಒಂದರಹಿಂದೆ ಒಂದು ಸಾಲಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಮೆರಿಕ ,ಕೆನಡಾ, ಯು.ಕೆ ದೇಶಗಳಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಕಂಪನಿ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ನೆಡ್ತಾ ಇದ್ದು ಈಗ ಭಾರತಕ್ಕೂ ಕಾಲಿಡಲಿದ್ದಾರೆ, ಭಾರತದ ಎಲ್ಲಾ ಮೂಲೆಯಲ್ಲೂ ಕೋಣೆಯಲ್ಲಿ ಇನ್ನೂ ಮುಂದೆ ಹೈ ಸ್ಪೀಡ್ ಇಂಟರ್ನೆಟ್ ಹೊಸ ಆವೃತ್ತಿ
ಪಡೆಯಲಿದೆ. ಸ್ಟಾರ್ ಲಿಂಕ್ ಕಂಪನಿ ಇನ್ನು ಮುಂದೆ ಒಟ್ಟು 12000 ಉಪಗ್ರಹವನ್ನ ಉಡಾಯಿಸಲು ರೂಪು ರೇಷೆಗಳನ್ನ ಸಿದ್ದಪಡಿಸಿಕೊಂಡಿದೆ. ಭೂಮಿಯನ್ನ ಸುತ್ತುವ(orbit) ಉಪಗ್ರಹಗಳು ಸುಮಾರು 500 ಕಿಲೋಮೀಟರ್ ಎತ್ತರದಲ್ಲಿರುತ್ತದೆ.

ವರದಿ: P. ಘನಶ್ಯಾಮ್ – ಬೆಂಗಳೂರು
