ಬೆಂಗಳೂರು: ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ತಿರುಗೇಟು ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ. ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅವರು ಹೋದ ಬಳಿಕ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಹಕ್ಕೂ ಇಲ್ಲ. ಮೈಸೂರಲ್ಲೇ ಮಾಡಬೇಕಾಗಿರುವ ಕೆಲಸ ಸಾಕಷ್ಟು ಇವೆ. ಎರಡು ಸಲ ಸಂಸದರಾಗಿರೋರು ಪ್ರತಾಪ್ ಸಿಂಹ ಬಳಸಿದ ಭಾಷೆ ಸಂಸದ ಸ್ಥಾನಕ್ಕೆ ಗೌರವ ತರುವಂಥದ್ದಲ್ಲ. ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ ಎಂದು ಎಚ್ಚರಿಕೆ ನೀಡಿದರು.

ಚುನಾವಣೆ ಸಮಯದಲ್ಲಿ ನಾನು ಇಂತಹ ಹೇಳಿಕೆಗಳನ್ನು ಎದುರಿಸಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅವರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದರು.
ಸದ್ಯ ಪ್ರತಾಪ್ ಸಿಂಹ ಸುಮಲತಾ ವಿರುದ್ಧ ಆ ಯಮ್ಮಾ ಕೆಲಸ ಮಾಡಲ್ಲ ಎಂದು ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮಲತಾ ಬೆಂಬಲಿಗರು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರೆ, ಇನ್ನೂ ಹಲವರು ಪ್ರತಾಪ್ ಸಿಂಹ ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ವರದಿ: ಸಿಸಿಲ್ ಸೋಮನ್
