ಶಿಕಾರಿಪುರ: ಶಿಕಾರಿಪುರದ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಲಕ್ಷ್ಮೀ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಆಯ್ಕೆಯಾಗಿದ್ದಾರೆ.
ಲಕ್ಷ್ಮೀ ಮಹಾಲಿಂಗಪ್ಪ ಮತ್ತು ಸಾದಿಕ್ ಗೆ 12 ಮತಗಳು ಲಭ್ಯವಾದರೆ, ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಮ್ಮ ಹಾಗೂ ಉಪಾಧ್ಯಕ್ಷ ದಸ್ತಗಿರಿ ಅವರಿಗೆ 9 ಮತಗಳು ಲಭ್ಯವಾಗಿದೆ.
ಈಗಾಗಲೇ ಶಿಕಾರಿಪುರ ಪುರಸಭೆಯಲ್ಲಿ 23 ಜನ ಪುರಸಭೆ ಸದಸ್ಯರಿದ್ದು ಇದರಲ್ಲಿ ಬಿಜೆಪಿ 8, ಕಾಂಗ್ರೆಸ್ 12 ಜನ ಮತ್ತು ಇತರರು ಮೂವರಿದ್ದರು. ಮೂವರು ಕಾಂಗ್ರೆಸ್ ಸದಸ್ಯರು ರಾಜೀನಾಮೆ ಸಲ್ಲಿಸಿದ ಕಾರಣ ಕಾಂಗ್ರೆಸ್ 12 ರಿಂದ 9 ಸ್ಥಾನಕ್ಕೆ ಕುಸಿದಿದೆ
ಇದರಿಂದಾಗಿ ಬಿಜೆಪಿ ಮತ್ತು ಇತರರು ಸೇರಿ ಒಟ್ಟು 11 ಜನರ ಸಂಖ್ಯಾಬಲವಿದ್ದರೆ. ಕಾಂಗ್ರೆಸ್ 9 ಜನರಿದ್ದಾರೆ. ಸಂಸದರಾದ ಶ್ರೀ ಬಿ.ವೈ ರಾಘವೇಂದ್ರರವರು ಇಂದು ಈ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಚಲಾಯಿಸಿದ್ದಾರೆ. ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ರವರು,ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ವೀರೇಂದ್ರ ಪಾಟೀಲ್ ರವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ಧಲಿಂಗಪ್ಪ ನಿಂಬೆಗುಂದಿ ಅವರು, ಮತ್ತು ಶ್ರೀ ಪರಶುರಾಮ್ ರವರು ಸೇರಿದಂತೆ ಪ್ರಮುಖರು ಹಾಜರಿದ್ದರು.

ವರದಿ: ಗೌತಮ್ ಕೆ.ಎಸ್
