Regional

ಶಂಕರ್ ನಾಗ್ ಕರ್ನಾಟಕ ಕಂಡ ಅಪರೂಪದ ಪ್ರತಿಭೆ ಅವರ ಜನ್ಮದಿನದಂದು ಅವರನ್ನು ನೆನೆಯೋಣ

ಸಾಗರ: ನಾಡು ಕಂಡ ಅಪರೂಪದ ಪ್ರತಿಭೆ, ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ಪ್ರೀತಿಯ ಶಂಕ್ರಣ್ಣ ಆಗಿಯೇ ಉಳಿದಿರುವ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ನೆನೆಯೋಣ. ಅಲ್ಪ ಅವಧಿಯಲ್ಲಿಯೇ ಅಪಾರ ಸಾಧನೆ ಮಾಡಿದ ಅಪ್ರತಿಮ ಪ್ರತಿಭಾವಂತ ಶಂಕರ್ ನಾಗ್ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದಿದ್ದಾರೆ.

ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು.ನಕ್ಷತ್ರ ನಾಮ’ಅವಿನಾಶ’.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.

ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದರ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.


ಅಣ್ಣನಂತೆ ತಮ್ಮನೂ ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು.

ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು.ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ “ಗೆದ್ದ ಮಗ”. ತಮ್ಮ ಸಹೋದರ ಅನಂತ ನಾಗ್ ಅವರೊಡನೆ “ಮಿಂಚಿನ ಓಟ”, “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳನ್ನು ನಿರ್ಮಿಸಿದರು.


ಇದರಲ್ಲಿ “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.


ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ “ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು” ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದೂ ಸಹ ಇದುವರೆಗೆ ಎಲ್ಲ ತರದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’.

ಶಂಕರ್‌ನಾಗ್ (ನಾಗರಕಟ್ಟೆ ಶಂಕರ್) (9 ನವೆಂಬರ್ 1954 – 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು (ಪುರುಷ) ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7 ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು . ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ.

ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್‌ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ.ಆ ರಂಗಮಂದಿರಕ್ಕೆ”ರಂಗಶಂಕರ” ಎಂದು ಹೆಸರಿಟ್ಟರು.”ರಂಗಶಂಕರ” ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.

ವರದಿಸಿಸಿಲ್ ಸೋಮನ್

Click to comment

Leave a Reply

Your email address will not be published.

19 − fifteen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us