ಬೆಂಗಳೂರು : ಸಕ್ರಾ ಅಂತರರಾಷ್ಟ್ರೀಯ ಆಸ್ಪತ್ರೆ ವತಿಯಿಂದ ಹೊರತಂದಿರುವ ರೊಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸಾ ವ್ಯವಸ್ಥೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಸಕ್ರಾ ಅಂತರರಾಷ್ಟ್ರೀಯ ಆಸ್ಪತ್ರೆ ವತಿಯಿಂದ ಹೊರತಂದಿರುವ ರೊಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಿಡುಗಡೆ ಮಾಡಿದರು. ಬಹಳ ಜನರನ್ನು ಬಾಧಿಸುತ್ತಿರುವ ಮಂಡಿ ಅಥವಾ ಮೊಣಕಾಲು ನೋವಿನಿಂದ ಗುಣಮುಖರಾಗಲು ವೈದ್ಯಕೀಯ ನೆರವು ಅಗತ್ಯ. ಈ ನಿಟ್ಟಿನಲ್ಲಿ ಸಕ್ರಾ ಅಂತರರಾಷ್ಟ್ರೀಯ ಆಸ್ಪತ್ರೆಯ ವತಿಯಿಂದ ಸಿದ್ಧಪಡಿಸಲಾಗಿರುವ ರೊಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಇಂದು ಬಿಡುಗಡೆ ಮಾಡಲಾಯಿತು.
ಸಕ್ರಾ ಅಂತರರಾಷ್ಟ್ರೀಯ ಆಸ್ಪತ್ರೆಯ ಸಿಎಒ ಲವಕೇಶ್, ಹಿರಿಯ ಸಮಾಲೋಚಕ ಡಾ.ಚಂದ್ರಶೇಖರ್, ಕ್ಯುವಿಸ್ ಜಾಯಿಂಟ್ ಸಂಸ್ಥೆಯ ಜೀನ್ ಚೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
