ರಿಪ್ಪನಪೇಟೆ: ರಿಪ್ಪನಪೇಟೆ ರೈತರಿಗೆ ”10 MVA ಟ್ರಾನ್ಸ್ಫಾರ್ಮರ್” ಬಿಗ್ ರಿಲೀಫ್ ಕೊಟ್ಟ ಶಾಸಕರಾದ ಶ್ರೀ ಹೆಚ್.ಹಾಲಪ್ಪ.

ರಿಪ್ಪನಪೇಟೆ ಮೆಸ್ಕಾಂ ವ್ಯಾಪ್ತಿಯ ಉಪ ವಿದ್ಯುತ್ ಸ್ಥಾವರದಲ್ಲಿರುವ 10 MVA ಟ್ರಾನ್ಸ್ಫಾರ್ಮರ್ ಗೆ ಓವರ್ ಲೋಡ್ ಸಮಸ್ಯೆ ಉಂಟಾಗಿ ತೊಂದರೆ ಅನುಭವಿಸುತ್ತಿದ್ದ ರೈತರು ಹಾಗೂ ಸಾರ್ವಜನಿಕರು ಇದರಿಂದ ಮುಕ್ತಿ ನೀಡುವಂತೆ ಮನವಿ ನೀಡಿದ್ದರು.

ಮುಂದುವರೆದ ಭಾಗವಾಗಿ ಹೆಚ್ಚುವರಿ 10 MVA ನೀಡುವಂತೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹಾಗೂ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳನ್ನು ಭೇಟಿ ಮನವಿ ಸಲ್ಲಿಸಲಾಗಿತ್ತು. ಅದರ ಪ್ರತಿಫಲವಾಗಿ ಸರ್ಕಾರದಿಂದ ಮಂಜೂರಾಗಿರುವ ಹೆಚ್ಚುವರಿ 10 MVA, ಟ್ರಾನ್ಸ್ಫಾರ್ಮರ್ #ರಿಪ್ಪನಪೇಟೆ ವಿಭಾಗಕ್ಕೆ ಬಂದಿರುವುದ ಗಮನಾರ್ಹ ಸಂಗತಿ.

ಇದರಿಂದ ರಿಪ್ಪನಪೇಟೆ, ಅರಸಾಳು, ಕೆಂಚನಾಳ, ಬಾಳೂರು, ಬೆಳ್ಳೂರು, ಜೇನಿ, ಗರ್ತಿಕೆರೆ, ಹುಂಚ ಗ್ರಾ.ಪಂ ವ್ಯಾಪ್ತಿಯ ರೈತರಿಗೆ, ಸಾರ್ವಜನಿಕರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಗೆ ಮುಕ್ತಿ ದೊರೆಯಲಿದೆ.

ವರದಿ: ಸಿಸಿಲ್ ಸೋಮನ್
