ಮೈಸೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶ್ರೀ ಬಿ.ವೈ. ವಿಜಯೇಂದ್ರ ರವರು ಗ್ರಾಮಗಳ ಅಭಿವೃದ್ಧಿಗೆ ಬದ್ಧವಾಗಿರುವ ಬಿಜೆಪಿ ರಾಜ್ಯ ಸರ್ಕಾರ, ಹಲವಾರು ಯೋಜನೆ, ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಬದುಕು ಹಸನಾಗಿಸುವ ಕಾಯಕದಲ್ಲಿ ನಿರತವಾಗಿದೆ ಎಂದು ಹೇಳಿದರು .ಇದನ್ನು ಜನಮನಕ್ಕೆ ಮುಟ್ಟಿಸುವ ಗ್ರಾಮಸ್ವರಾಜ್ಯ ಸಮಾವೇಶದ ಅಂಗವಾಗಿ ಇಂದು ಮೈಸೂರು ಗ್ರಾಮಾಂತರ ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು.

ಸಮಾವೇಶದಲ್ಲಿ ಮಾನ್ಯ ಸಚಿವರುಗಳಾದ ಶ್ರೀ ಆರ್. ಅಶೋಕ, ಶ್ರೀ ಎಸ್ ಟಿ ಸೋಮಶೇಖರ್ ಗೌಡ ಶಾಸಕರು , ಶ್ರೀ ನಾರಾಯಣಗೌಡ, ಶ್ರೀ ಕೆ ಗೋಪಾಲಯ್ಯ, ನಂಜನಗೂಡು ಶಾಸಕರು ಶ್ರೀ ಹರ್ಷವರ್ಧನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರವಿಕುಮಾರ್, ಪದಾಧಿಕಾರಿಗಳು ಮತ್ತು ನಮ್ಮ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ: ಸಿಸಿಲ್ ಸೋಮನ್
