Regional

ನೆಲ – ಜಲ – ಭಾಷೆ ಗಾಗಿ ಅವರನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ ಅವರೇ ”ರವಿ ಕುಮಾರ್” ಎಂಬ ಕನ್ನಡಾಭಿಮಾನಿ

ಬೆಂಗಳೂರು : ನೆಲ – ಜಲ – ಭಾಷೆ ಗಾಗಿ ಅವರನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ ಅವರೇ ”ರವಿ ಕುಮಾರ್” ಎಂಬ ಕನ್ನಡಾಭಿಮಾನಿ.


ನವೆಂಬರ್ ತಿಂಗಳು ಪೂರ್ತಿ ಕರುನಾಡಿನಲ್ಲಿ ಕನ್ನಡದ ಹಬ್ಬ , ಕನ್ನಡ ಡಿಂಡಿಮ , ಸಿಲಿಕಾನ್ ಸಿಟಿ ಯಿಂದ ಹಿಡಿದು ಕರ್ನಾಟಕದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಮೆರುಗು ಹಾಗೂ ಕನ್ನಡದ ಕಂಪು – ಕನ್ನಡದ ಇಂಪಿನ ಬಗ್ಗೆ ಮಾತು ಹಾಗೂ ನವೆಂಬರ್ ಮಾಸ ಪೂರ್ತಿ ಕನ್ನಡದ ,ಕನ್ನಡಿಗರ ಹಬ್ಬ – ಕರುನಾಡಿನಲ್ಲಿ !!
ಬೆಂಗಳೂರು ನಗರದ ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಲ್ಲಿ ನಿಮಗೆ ಕನ್ನಡದ ಪ್ರೇಮಿಯೊಬ್ಬರು ಸಿಗುತ್ತಾರೆ ಅವರು ಸತತ 28 ವರುಷಗಳಿಂದ ಅವರದೇ ಆದ ರೀತಿಯಲ್ಲಿ ತಾಯಿ ಭುವನೇಶ್ವರಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ .


ಅವರು ವೃತ್ತಿಯಲ್ಲಿ ಆಟೋ ಚಾಲಕ ,ಇರುವುದು ಸಿಲಿಕಾನ್ ಸಿಟಿ ಯ ‘ಇಟ್ಟಮಡೂ’ ವಿನಲ್ಲಿ. ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಿಂದ ಇಟ್ಟ ಮಡೂ ವಿಗೆ ಹೋಗುವ ಬಸ್ ನಿಲ್ದಾಣದಲ್ಲಿ ಇರುವ ಆಟೋ ನಿಲ್ದಾಣದಲ್ಲಿ ನವೆಂಬರ್ ತಿಂಗಳ ಮುಸ್ಸಂಜೆ ಹೊತ್ತಿನಲ್ಲಿ ನಿಂತಿತ್ತು ಕನ್ನಡದ ತೇರು , ಸುತ್ತ ಮುತ್ತ ನೋಡುತ್ತಾ ನಿಂತೆ ಆಗ ಅಲ್ಲಿಗೆ ಬಂದ ರವಿ ಕುಮಾರ್ ಇನ್ನೇನು ಕನ್ನಡದ ತೇರು ಹತ್ತಿ ಹೊರಟಿದ್ದರು ಆಗ ಅವರ ಜೊತೆ ಮಾತು ಆರಂಭ ವಾಗಿತ್ತು , ಇನ್ ಆನ್ ಲೈನ್ ಪತ್ರಿಕೆ ಮಾತು ಕತೆ ನಡೆಸಿದ್ದು ಅವರ ಕುರಿತ ಲೇಖನ ಇಲ್ಲಿದೆ. ಕೋಲಾರದ ವೆಂಕಟರಾಮಯ್ಯ ಮತ್ತು ಶ್ರೀಮತಿ ಚಂದ್ರಮ್ಮ ದಂಪತಿ ಪುತ್ರರಾಗಿ 1972ರಲ್ಲಿ ರವಿಕುಮಾರ್ ಜನಿಸಿದರು.

ಓದಿದ್ದು 7 ನೇ ತರಗತಿವರೆಗೆ ಆದರೆ ತಾವು ಹುಟ್ಟಿದ್ದ ನಾಡಿನ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹಾಗೂ ಕನ್ನಡ ಭಾಷೆಯ ಮೇಲೆ ಪ್ರೇಮ !! ( 2020 ರ ) ಈಗ ಭಾರತಕ್ಕೆ ಬಂದು ಎರಗಿರುವ ಕರೊನಾ – ಇವರು ನಾಡಿಗೆ ಕರೊನಾ ಸಂಕಷ್ಟ ಎದುರಾಗಿ ಆಟೋ ಬಾಡಿಗೆ ಕಡಿಮೆ ಆಗಿದೆ ಆದರೂ ಕುಗ್ಗದೆ ಸತತ 28 ವರುಷ ಗಳಿಂದ ತಾವು ಮಾಡಿ ಕೊಂಡು ಬಂದಿರುವ ಕನ್ನಡಾಂಬೆಯ ಸೇವೆಯನ್ನು ಕೈ ಬಿಡದೆ ಅವರ ಆಟೋ ರಿಕ್ಷಾ ಗೆ ಅಂದರೆ ಅವರ’ ಕನ್ನಡದ ತೇರು’ ಅದನ್ನು ಈ ಬಾರಿಯ ಸಿಂಗಾರ ಮಾಡಿ ನವೆಂಬರ್ ತಿಂಗಳು ಪೂರ್ತಿ ಸಿಲಿಕಾನ್ ಸಿಟಿ ತುಂಬಾ ಕನ್ನಡದ ತೇರಿನಲ್ಲಿ ಸಂಚಾರ ಮಾಡುತ್ತಾ ಹೊಟ್ಟೆ ಪಾಡಿಗೆ ಆಟೋ ರಿಕ್ಷಾ ಚಾಲನೇ ಮಾಡುತ್ತಾ ಕನ್ನಡದ ಕಂಪನ್ನು 28 ವರುಷಗಳಿಂದ ಹಂಚುತ್ತಾ ಇದ್ದಾರೆ ಕನ್ನಡ ಪ್ರೇಮಿ ರವಿ ಕುಮಾರ್ .!!
ನೆಲ – ಜಲ – ಭಾಷೆ ಗಾಗಿ ಅವರನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ ಅವರೇ ರವಿ ಕುಮಾರ್ ಎಂಬ ಕನ್ನಡಾಭಿಮಾನಿ .
ಸತತ 28 ವರ್ಷಗಳಿಂದ ಕನ್ನಡ ತಾಯಿಯ ಸೇವೆ ಮಾಡುತ್ತಾ ಅವರ ಆಟೋಗೆ ಬಾಡಿಗೆಗೆ ಬರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಹೇಳಿಕೊಡುವ ಕಾಯಕ ಮಾಡುತ್ತಾ ಹೊಟ್ಟೆ ಪಾಡಿಗೆ ಆಟೋ ಚಾಲಕ ವೃತ್ತಿ ನಿಭಾಯಿಸುತ್ತಾ ಎಲೆ ಮರೆಯ ಕಾಯಿ ಆಗಿ ತಾಯಿ ಕನ್ನಡಾಂಬೆಯ ಅಭಿಮಾನವನ್ನು ಕನ್ನಡದ ನಾಡಿನಲ್ಲಿ ಕನ್ನಡ ಸಾಹಿತ್ಯ ದ ಕಂಪನ್ನು ಪಸರಿಸುತ್ತಾ ಇದ್ದಾರೆ ರವಿ !!
ನವೆಂಬರ್ ತಿಂಗಳಲ್ಲಿ ಅವರ ಆಟೋ ವನ್ನು ಕನ್ನಡ ದ ತೇರು ಮಾಡಿ ಆಟೋ ರಿಕ್ಷಾವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಿ ತಾಯಿ ಭುವನೇಶ್ವರಿ ಯ ಛಾಯಾ ಚಿತ್ರವನ್ನು ಆಟೋ ಮೇಲ್ಭಾಗದಲ್ಲಿ ಕಟ್ಟಿ ಸಿಲಿಕಾನ್ ಸಿಟಿ ಯಲ್ಲಿ ಕನ್ನಡ ಪ್ರೇಮ ವನ್ನು ಮೆರೆಯುತ್ತಾರೆ ಕನ್ನಡ ದ ಅಭಿಮಾನಿ ಆಟೋ ಚಾಲಕ ರವಿ ಕುಮಾರ್ .
ಕನ್ನಡ ಭಾಷೆ ,ನೆಲ , ಜಲ ವನ್ನು ಶ್ರೀಮಂತ ಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಇವರ ಪಯಣಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸೋಣ.

ವರದಿಸಿಸಿಲ್ ಸೋಮನ್

Click to comment

Leave a Reply

Your email address will not be published.

fifteen − 15 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us