“ಟಿಕ್ ಟಾಕ್ ನಿಂದ ಜೀವ ಬಲಿ”.
ಭಾರತದಾದ್ಯಂತ ಸಾಮಾಜಿಕ ಜಾಲತಾಣ ಅನ್ನೋ ಹೆಸರಲ್ಲಿ ಕೆಟ್ಟ ಪ್ರವೃತ್ತಿ ತಂದಿದ್ದ ಚೈನಾದ “ಟಿಕ್ ಟಾಕ್” ಮೊಬೈಲ್ ಆಪ್ ಯಾರಿಗೆ ತಾನೆ ಗೊತ್ತಿಲ್ಲ, ಸಿನಿಮಾದ ಡೈಲಾಗ್ ಗಳಿಗೆ ತುಟಿ ಜೋಡಿಸಿ, ಹಾಡುಗಳಿಗೆ ವಿವಿಧ ಭಂಗಿಯಲ್ಲಿ ಹೆಜ್ಜೆ ಹಾಕಿ ವಿಡಿಯೋ ತುಣುಕನ್ನು ಹರಿಬಿಡುವ ಚಟವನ್ನ ಹಲವರು ಅಂಟಿಸಿಕೊಂಡಿದ್ದರು. ಜನಕ್ಕೆ ಇದರ ಹುಚ್ಚು ಯಾವ ಮಟ್ಟಿಗೆ ಹಿಡಿದಿತ್ತೆಂದರೆ, ನಿಂತಿರುವ ಸ್ಥಳದ ಅರಿವಿಲ್ಲದೆ ಹಗಲು ರಾತ್ರಿಗಳನ್ನು ಪರಿಗಣಿಸದೆ ದಿನಕ್ಕೆ 2 -3 ವಿಡಿಯೋಗಳನ್ನ ಕಡ್ಡಾಯವಾಗಿ ಹಾಕಲು ಪಣ ತೊಟ್ಟಿದ್ದರು..ದಿಡೀರ್ ಖ್ಯಾತಿ ಪಡೆದು, ಹೊತ್ತು ಮೊಳಗುವ ಮುನ್ನ ಸ್ವಯಂ ಘೋಷಿತ ಸ್ಟಾರ್ಗಳನ್ನ ತಯಾರಿಸಿದ ಪ್ಲಾಟ್ಫಾರ್ಮ್ ಇದು. ಹೀಗೆ ಪೈಪೋಟಿಯ ಮೇರೆಗೆ ವಿಡಿಯೋ ಹಾಕೋ ತಲೆ ಮಾಸಿದವರನ್ನು ಕಾಣಲು ಮತ್ತಷ್ಟು ಅರಿವುಗೆಟ್ಟ ಮಂದಿ ಕಾತುರದಿಂದ ಕಾಯ್ತಿದ್ರು.. ವಿಡಿಯೋ ಹಾಕೋ ಕೆಲವರು ತಮ್ಮನ್ನು ತಾವೇ ದೊಡ್ಡ ಕಲಾವಿದರೆಂದು ಪರಿಗಣಿಸಿದ್ದರು. ಚೀನಾದ ಮೂಲದ ಆಪ್ ಇದಾದ ಕಾರಣ ಕೆಲವು ತಿಂಗಳ ಹಿಂದೆಯಷ್ಟೇ ಭಾರತ ಹಲವು ಆಪಗಳನ್ನ ಬ್ಯಾನ್ ಮಾಡುವ ಜೊತೆಯಲ್ಲಿ, ಟಿಕ್ ಟಾಕ್ ಕೂಡ ಸೇರಿದ್ದು ಈ ಹೈ ಡ್ರಾಮಗೆ ತಿಲಾಂಜಲಿ ನೀಡಲಾಯಿತು… ಈಗ ಈ ಟಿಕ್ ಟಾಕ್ ಅನ್ನೋ ಹುಚ್ಚಾಟ ಇಟಲಿಯಲ್ಲಿ ಜೀವ ಬಲಿಗೆ ಕಾರಣವಾಗಿದೆ.. 10 ವರ್ಷದ ಹುಡುಗಿಯೊಬ್ಬಳು ಟಿಕ್ ಟಾಕ್ ನ ಗ್ರೂಪ್ ಒಂದರಲ್ಲಿ ಸೇರಿಕೊಂಡು ಸ್ಪರ್ಧೆಯ ಹೆಸರಲ್ಲಿ ಕತ್ತಿಗೆ ಹಗ್ಗ ಕಟ್ಟಿಕೊಂಡು ,ಬಹುಮಾನದ ಆಸೆಗಾಗಿ ಉಸಿರು ಬಿಗಿಹಿಡಿಯುವ ಕ್ರೂರ ಸಾಹಸದಲ್ಲಿ ತೊಡಗಿತ್ತು, ದುರಾದೃಷ್ಟವಶಾತ್ ಆ ಹುಡುಗಿ ತನ್ನ ಪ್ರಾಣವನ್ನೇ ಕಳೆದುಕೊಂಡು ಅವರ ತಂದೆತಾಯಿಗಳಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದ್ದಾಳೆ . ಸಮಾಜದ ಮನಸ್ಥಿತಿಯನ್ನ ಹಾಳು ಮಾಡುತ್ತ, ದುಷ್ಪರಿಣಾಮಕ್ಕು ಕಾರಣವಾದ ಈ ಆಪ್ನ ಕಡ್ಡಾಯವಾಗಿ ಇಟಲಿಯಲ್ಲಿ ಕೂಡ ಬಾನ್ ಮಾಡಬೇಕು ಎಂದು ನೆಟ್ಟಿಗರು ಗುಡುಗಿದ್ದಾರೆ.ಆ ಮಗುವಿನ ಸಾವಿಗೆ ಕಾರಣಕರ್ತಾರಾದ ಹಾಗೂ ಇಂತಹ ಹೇಯ್ಯ ಕೃತ್ಯೆಗೆ ಕುಮ್ಮಕ್ಕು ನೀಡಿದವರಿಗೂ ತಕ್ಕ
ಶಾಸ್ತೀ ಮಾಡಲಾಗುವುದು ಎಂದು ಇಟಲಿಯ ಟಿಕ್ ಟಾಕ ವಕ್ತಾರರೇ ಜಾರಿಕೆ ಹೇಳಿಕೆಯನ್ನ ನೀಡಿದ್ದಾರೆ ..

ವರದಿ: P. ಘನಶ್ಯಾಮ್ – ಬೆಂಗಳೂರು

