ಬೆಂಗಳೂರು: ಫೇಸ್ಬುಕ್ ಗೊತ್ತೇ ಇಲ್ಲ ಪರಿಸರ ತೋಟ ಅಂತ ಜೀವಿಸುತ್ತಿದ್ದೇವೆ ನೋವು ಕೊಡಬೇಡಿ-ನಟ ವಿನೋದ್ ರಾಜ್. ಹಿರಿಯ ನಟಿ ಲೀಲಾವತಿ ಪುತ್ರ ನಟ ವಿನೋದ್ ರಾಜ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದರು. ಈ ಬಗ್ಗೆ ವಿನೋದ್ ರಾಜ್ ನಿನ್ನೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಕಿಡಿಗೇಡಿಗಳ ಈ ಕೃತ್ಯಕ್ಕೆ ತೀವ್ರ ಬೇಸ ವ್ಯಕ್ತಪಡಿಸಿರುವ ವಿನೋದ್ ರಾಜ್, ಸಾಯಿಪ್ರಕಾಶ್ ಅವರು ಕರೆ ಮಾಡಿದಾಗ ನನಗೆ ಈ ವಿಚಾರ ತಿಳಿಯಿತು. ನಂಗೆ ಫೇಸ್ಬುಕ್ ಅದೆಲ್ಲಾ ಗೊತ್ತೇ ಇಲ್ಲಾ. ನಾನು ನನ್ನ ತಾಯಿ ಪರಿಸರ, ತೋಟ, ಆಸ್ಪತ್ರೆ ಹಾಗೂ ಪ್ರಾಣಿಗಳೊಂದಿಗೆ ಜೀವಿಸುತ್ತಿದ್ದೇವೆ. ಸಮಾಜದಲ್ಲಿ ಕಲಾವಿದರಿಗೆ ಮಾನಸಿಕವಾಗಿ ನೋವು ಕೊಡಬೇಡಿ. ಈ ರೀತಿ ಕೃತ್ಯವೆಸಗಿ ನಮಗೆ ಕೆಟ್ಟ ಹೆಸರು ತರಬೇಡಿ, ಮನೆಹಾಳು ಕೆಲಸ ಮಾಡಬೇಡಿ. ಈಗಾಗಲೇ ಸಾಲು ಸಾಲು ಕಷ್ಟಗಳನ್ನು ಎದುರಿಸಿ ಬದುಕುತ್ತಿದ್ದೇವೆ, ಈ ನಕಲಿ ಖಾತೆಯಿಂದ ಮತ್ತಷ್ಟು ನೋವುಂಟಾಗಿದೆ. ತಪ್ಪಿತಸ್ಥರ ಮೇಲೆ ಕಾನೂನಿನ ರೀತಿ ಸೂಕ್ತ ಕ್ರಮಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ವರದಿ: ಸಿಸಿಲ್ ಸೋಮನ್
