ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಮುಂದಾದ ಈ ವೇಗದೂತ..
ತನ್ನ ಬಿರುಸಿನ ಯಾರ್ಕರ್, ರಿವರ್ಸ್ ಸ್ವಿಂಗ್ ಮೂಲಕ ಖ್ಯಾತಿ ಹೊಂದಿದ್ದ ಕ್ರಿಕೆಟಿಗ , ವೇಗದ ಬೋಲರ್ “ಇರಫಾನ್ ಪಥಾನ್” ತಮಿಳ್ ಸಿನಿಮಾದಲ್ಲಿ ನಟಿಸ್ತಿದ್ದಾರೆ..
ಪ್ರತಿ ಸಿನಿಮಾದಲ್ಲೂ ಹೊಸದನ್ನ, ವೈವಿಧ್ಯಮಯ ಪಾತ್ರವನ್ನ ಪ್ರಸ್ತುತ ಪಡಿಸುವ ತಮಿಳುನಾಡಿನ ಜಾಣ ಕಲಾವಿದ “ವಿಕ್ರಮ್” ಅಭಿನಯದ ಹೊಸ ಸಿನಿಮಾ “ಕೋಬ್ರಾ” ದಲ್ಲಿ ಇರ್ಫಾನ್ ಪಥಾನ್ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದಾರೆ, 6 ಅಡಿ ಎತ್ತರ ,ದಿಟ್ಟವಾದ ಮೈಕಟ್ಟು ಹೊಂದುರುವ ಈತ ಕ್ರಿಕೆಟ್ ಆಡುವ ಸಮಯದಲ್ಲೇ ಹಲವು ಬ್ರಾಂಡ್ ಗಳಿಗೆ ರೂಪದರ್ಶಿಯಾಗಿ ಜಾಹಿರಾತುಗಳಲ್ಲಿ ನಟಿಸಿದ್ದರು. ಕ್ರಿಕೆಟಿಗೆ ವಿದಾಯ ಹೇಳಿದ ಬಳಿಕೆ, ವೃತ್ತಿ ಜೇವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ ಆದರೆ ಈ ಸಾರ್ತಿ ಸಿನಿಮಾ ವಿಭಾಗದಲ್ಲಿ.
ನಟ ಚಿಯಾನ್ ವಿಕ್ರಂ ಜೊತೆ ಸಣ್ಣ ಪಾತ್ರವಾದರು ಸರಿ, ಹಾಗೆ ನಟಿಸೋದಕ್ಕೆ ಒಂದು ಅವಕಾಶ ಸಿಕ್ಕಿದ್ರೆ ಸಾಕಿ ಅಂತ ಎಷ್ಟೋ ಕಲಾವಿದರು ಇಂದಿಗೂ ಸಾಲಲ್ಲಿ ಕಾಯ್ತಿದ್ದಾರೆ, ವಿಷ್ಯ ಏನಂದ್ರೆ ” ಇರಫಾನ್ ಪಥಾನಿಗೆ ಅವಕಾಶ ಫ್ರೀ ಹಿಟ್ ರೂಪದಲ್ಲಿ ಸಿಕ್ತು”, ಅದನ್ನ ಹೇಗೆ ಅವರು ಉಪಯೋಗಿಸಿಕೊಂಡಿದ್ದಾರೆ ಅನ್ನೋದೇ ನಮ್ಮ ಕುತೂಹಲ. ಈ ಸಿನಿಮಾದಲ್ಲಿ ವಿಕ್ರಂ ಜೊತೆಯಾಗಿ K.G. F ಖ್ಯಾತಿಯ ಕನ್ನಡದ ಹುಡ್ಗಿ ಶ್ರೀನಿಧಿ ಶೆಟ್ಟಿ ಕೂಡ ಇರ್ತಾರೆ.
ಸಂದರ್ಶನವೊ0ದರಲ್ಲಿ ,” ನನಗೆ ನಟಿಸೋಕೆ ಅವಕಾಶ ಕೊಟ್ಟ ನಿರ್ದೇಶಕ ಅಜಯ್ ಜ್ನ್ಯಾನಮತ್ತು ಅವರಿಗೆ ಕೃತಜ್ನ್ಯಾನಾಗಿರ್ತೀನಿ” ಅಂತ ಖುದ್ದು ಪಥಾನ್ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದಾರೆ,
ಸಿನಿಮಾದಲ್ಲಿ ನಟಿಸೋ ಬಯಕೆ ಮುಂಚಿನಿಂದಲೂ ಇತ್ತು ಆದ್ರೆ ಸದಭಿರುಚಿಯ ಪಾತ್ರ, ಕಥೆ, ಮುಖ್ಯವಾಗಿ ಒಳ್ಳೆ ತಂಡಕ್ಕಾಗಿ ಕಾಯ್ತಿದ್ದೆ ಅದು ಈಗೆ ನಿಜ ಆಗಿದೆ ಅನ್ನೋದನ್ನ ಕೂಡ ಹೇಳಿದ್ರು.
ರೋಚಕ ಬೊಲಿಂಗ್ ನಿಂದ ಶ್ರೇಷ್ಟ ಅಂತರರಾಷ್ಟ್ರೀಯ ಆಟಗಾರರನ್ನ ತಿಣುಕುವಂತೆ ಮಾಡಿದ ಭಾರತದ ಸ್ಟಾರ್ ಈ ವೇಗದೂತ , ಥ್ರಿಲ್ಲರ್ ಕಥಾವಸ್ತು ಆಧಾರಿತ ಸಿನಿಮಾದಲ್ಲಿಯು ಹೊಸ ಛಾಪು ಮೂಡಿಸಲಿ..
ವರದಿ: P. ಘನಶ್ಯಾಮ್ – ಬೆಂಗಳೂರು