ಸಾಗರ: ಸಾಗರ ತಾಲ್ಲೂಕು ಕಾಂಗ್ರೆಸ್ ಪಕ್ಷದ ಕಛೇರಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ದ , ಬೃಹತ್ ಪ್ರತಿಭಟನೆ.

ಇಂದು ಬೆಳಿಗ್ಗೆ 10-30 ಕ್ಕೆ ಕಾಂಗ್ರೆಸ್ ಪಕ್ಷದ ಕಛೇರಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ , ಗ್ಯಾಸ , ದರವನ್ನು ನಿಗದಿತ ಮೊತ್ತಕ್ಕಿಂತ ಜಾಸ್ತಿ ಆಗಿರುವುದರ ವಿರುದ್ದ , ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು . ಈ ಒಂದು ಪ್ರತಿಭಟನೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ.ಮತ್ತು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಬಿ.ಆರ್ ಜಯಂತ ಮತ್ತು ಸುರೇಶ್ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು .

ಈ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಾಯಕರು , ಮಾಜಿ ಸಚಿವರ,ಆಗಿರುವ ಶ್ರೀ ಕಾಗೋಡು ತಿಮ್ಮಪ್ಪ ನವರು ಮತ್ತು ಮಾಜಿ ಶಾಸಕರು .ಕೆ.ಪಿ.ಸಿ.ಸಿ ವಕ್ತಾರರು ಆಗಿರುವ ಗೋಪಾಲಕೃಷ್ಣ ಬೇಳೂರು , ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಕ್ರೆ, ತಾಲ್ಲೂಕು ಬ್ಲಾಕ್ ಅಧ್ಯಕ್ಷರಾದ ಬಿ,ಆರ್, ಜಯಂತ್, ಎಐಸಿಸಿ ಸೆಕ್ರೆಟರಿ ಡಾ!! ರಾಜನಂದಿನಿ ಅವರು, ಮಾಜಿ ಜಿಲ್ಲಾಧ್ಯಕ್ಷರಾದ ತೀ,ನ,ಶ್ರೀನಿವಾಸ್ , ನಗರ ಬ್ಲಾಕ್ ಅಧ್ಯಕ್ಷರಾದ ಸುರೇಶ್ ಬಾಬು, ಮಾತನಾಡಿದರು, ಈ ಒಂದು ಪ್ರತಿಭಟನೆಯಲ್ಲಿ *ಸೈಕಲ್ ಜಾತಾ ನಡೆಸಲಾಯಿತು ಪಕ್ಷದ ಎಲ್ಲಾ ಕಾರ್ಯಕರ್ತರು , ನಗರಸಭಾ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರು , ತಾಲ್ಲೂಕು ಪಂಚಾಯತ್ ಸದಸ್ಯರು , ಮುಂಚೂಣಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು , ನಗರ ಸಮಿತಿಯ ಪದಾಧಿಕಾರಿಗಳು . ಬೂತ್ ಅಧ್ಯಕ್ಷರು ವಾರ್ಡ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರು , ಜಿಲ್ಲಾ ಮುಖಂಡರು ಪಕ್ಷದ ಅಭಿಮಾನಿಗಳು , ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಲಾಯಿತು.

ವರದಿ: ಹರ್ಷ ಸಾಗರ

