ಸಾಗರ: ಶಾಸಕ ಹಾಲಪ್ಪ ಬಗರ್’ಹುಕುಂ ಸಮಿತಿಯ ಮೀಟಿಂಗ್ ಮಾಡಿ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ- ತೀ.ನ. ಶ್ರೀನಿವಾಸ್.

ಸಾಗರ ಮತ್ತು ಹೊಸನಗರ ಭಾಗದಲ್ಲಿ ಬಗರ್’ಹುಕುಂ ಅರ್ಜಿಗಳನ್ನು ಕೂಡಲೇ ವಿಲೇ ಮಾಡಬೇಕು ಮತ್ತು ಸಾಗರದಲ್ಲಿ ಆಶ್ರಯ ಮನೆಗಳನ್ನು ನೀಡುವಲ್ಲಿ ಆದ ಹಗರಣಗಳನ್ನು ಹೊರಗೆಳೆಯಬೇಕು. ಶಾಸಕ ಹಾಲಪ್ಪ ಕೇವಲ ಧ್ವಜಸ್ತಂಭ ತೋರಿಸಿ, ಕೆರೆಯಲ್ಲಿ ಬೋಟ್ ಬಿಟ್ಟು ತಮ್ಮ ಸಂಭಂದಿಕರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಕೆಲಸಗಳನ್ನು ಜರೂರಾಗಿ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಾಂಗ್ರೇಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಇನ್ನೂ ಅನೇಕ ವಿಚಾರಗಳನ್ನು ಹೇಳಿದರು. ಗೋಷ್ಟಿಯಲ್ಲಿ ರವಿ ಜಂಬಗಾರು, ಮಹಾಬಲೇಶ್ವರ ಶೆಟ್, ವಸಂತಶೇಟ್, ಎಲ್.ವಿ. ಸುಭಾಶ್ ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

