ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮೂವರಿಗೆ ಜಂಟಿಯಾಗಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಮೆರಿಕರದವರಾದ ಹಾರ್ವೆ ಆಲ್ಟರ್, ಚಾರ್ಲ್ಸ್ ರೈಸ್ ಹಾಗೂ ಬ್ರಿಟನ್ನ ಮೈಕೆಲ್ ಹೌಟನ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್ ಸಿ ವೈರಸ್ ಅನ್ವೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ರಕ್ತದಿಂದ ಹರಡುವ ಹೆಪಟೈಟಿಸ್ ವಿರುದ್ಧದ ಹೋರಾಟ ಕುರಿತು ಈ ಮೂವರು ಅನ್ವೇಷಣೆ ನಡೆಸಿದ್ದರು.
