nation

ಜಗನ್ನಾಥನ ಜಾಗವೇ ಮಾರಾಟಕ್ಕೆ!!

ಬೆಂಗಳೂರು : “ಕೃಷ್ಣo ವಂದೇ ಜಗದ್ಗುರು” ಎನ್ನುವುದಾ ನಂಬುತ್ತಾ, ಜಗತ್ ರಕ್ಷಕನಾದ ಒರಿಸಾದ ಪೂರಿಯ ಜಗನ್ನಾಥನಿಗೆ ಅಸಂಖ್ಯಾತ ಭಕ್ತರು ಮನಸೋಇಚ್ಛೆಯಿಂದ ಕಾಣಿಕೆಯ ರೂಪದಲ್ಲಿ ಅವರ ಪಿತ್ರಾರ್ಜಿತ, ಸ್ವಯಾರ್ಜಿತ ಸ್ವತ್ತನ್ನು ದಾನವಾಗಿ ಅರ್ಪಿಸಿದ್ದಾರೆ. ನೂರಾರು ವರ್ಷಗಳಿಂದ ಅನುಷ್ಠಾನದಲ್ಲಿರುವ ಈ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದ್ದು ಇಂದಿಗೆ ದೇವಸ್ಥಾನದ ಆಡಳಿತ ಸಂಸ್ಥೆಯ ಹೆಸರಲ್ಲಿ ಅಂದಾಜು 60 ಸಾವಿರ ಏಕರೆಯಷ್ಟು ಭೂಮಿ ನೋಂದಣಿಯಾಗಿದೆ. ಒರಿಸಾ ಅಷ್ಟೇ ಅಲ್ಲದೆ ಉತ್ತರಾಖಂಡ್, ಉತ್ತರಪ್ರದೇಶ್, ಬಿಹಾರ್, ಛತ್ತೀಸ್ಘರ್ ಮತ್ತು ಪಶ್ಚಿಮ ಬೆಂಗಾಲ್ ಸೇರಿದಂತೆ ಒಟ್ಟು 6 ರಾಜ್ಯಗಳ ವಿವಿಧ ಭಾಗಗಳಲ್ಲಿ ದೇವಸ್ಥಾನಕ್ಕೆ ಸೇರಿದ ಜಾಗಗಳಿವೆ. ಈಗ ವಿಷಯ ಏನೆಂದರೆ ದೇವಸ್ಥಾನದ ಮುಖ್ಯಸ್ಥರು ಮತ್ತು ಒರಿಸಾದ ಕೆಲವು ರಾಜಕೀಯ ನಾಯಕರು ಆ ಒಟ್ಟು ಸ್ವತ್ತಿನಲ್ಲಿ ಅರ್ಧ ಭಾಗದಷ್ಟು ಮಾರಾಟಕಿಟ್ಟಿದ್ದಾರೆ. 30 ವರ್ಷಗಳಿಂದ ಇಂದಿನ ತನಕ ಕೆಲವು ಕಿಡಿಗೇಡಿಗಳು ಅಕ್ರಮವಾಗಿ 36,500 ಎಕರೆಯಷ್ಟು ಜಾಗದಲ್ಲಿ ಕಾರ್ಖಾನೆ, ಖಾಸಗಿ ಕಟ್ಟಡಗಳು ಮತ್ತೆ ಮನೆ ಕಟ್ಟಿಕೊಂಡು ವಾಸಿಸತೊಡಗಿದ್ದಾರೆ, ಅದಕ್ಕೆ ಯಾವುದೇ ಸರಿಯಾದ ಪತ್ರ ಧಾಖಲೆಗಳಿಲ್ಲದ ಕಾರಣವಾಗಿ ಕಾನೂನಾತ್ಮಕ ಜರಾಗಿಸಲು ಒರಿಸ್ಸಾದ ಸರಕಾರ ವಿಫಲವಾಗಿದೆ, ಆದರಿದೀಗ ಒಂದು ಹೊಸ ತಿದ್ದುಪಡಿಯನ್ನ ಜಾರಿಗೊಳಿಸಿದೆ ಅದರ ಪ್ರಕಾರವಾಗಿ ದೇವಸ್ಥಾನಕ್ಕೆ ಸ್ವಂತವಾದ ಜಾಗವನ್ನ ಅತಿಕ್ರಮಣ ಮಾಡಿಕೊಂಡಿರುವ ಮಹಾನುಭಾವರು ಅತಿ ಕಡಿಮೆ ಬೆಲಯನ್ನ ತೆತ್ತಿ ಆ ಜಾಗಕ್ಕೆ ಸಂಭದಿಸಿದ ಖಾತ ಪತ್ರವನ್ನ ಸರ್ಕಾರದಿಂದ ಅಧಿಕೃತವಾಗಿ ಪಡೆಯಬಹುದು, ಎಕರೆಗೆ ಕೇವಲ 25 ಲಕ್ಷವನ್ನ ರೂಪಾಯಿಗಳನ್ನ ನಿಗದಿ ಪಡಿಸಿದೇ, ” ಜಗನ್ನಾಥನ ಜಾಗವನ್ನ ಮಾರಾಟಕಿಟ್ಟಿದ್ದಾರೆ”. ಅದೇನು ಸರ್ಕಾರಿ ಜಮೀನಗಲಿ ಅಥವಾ ಖಾಸಗಿ ಜಾಗವು ಅಲ್ಲಾ, ಬದಲಿಗೆ ಭಕ್ತರ ನಂಬಿಕೆಯ ಆಸ್ಥಾನ – ಶ್ರೀ ಕೃಷ್ಣನ ಸನ್ನಿಧಾನ. ನುಸುಳುಕೋರರನ್ನ ಒದ್ದು ಜಾಗವನ್ನ ಅವರಿಂದ ವಶ ಪಡಿಸಿಕೊಳ್ಳೋದು ಬಿಟ್ಟು ಈ ರೀತಿಯಾದ ಅಸ್ಸoಬದ್ಧವಾದ ಪರಿಹಾರ ಮಾರ್ಗವಾಗಿವನ್ನು ಆಯ್ಕೆ ಮಾಡಿ ಪುಕ್ಕಲು ತನವನ್ನ ಪ್ರದರ್ಶಿಸಿದೆ. ಇದರಿಂದಾಗಿ ಸರ್ಕಾರದ ಅಥವಾ ಮಂದಿರದ ಟ್ರಸ್ಟ್ ಬೊಕ್ಕಸ್ ಭರ್ತಿಯಾಗುತ್ತೋ ಇಲ್ಲವೋ ಯಾರದ್ದೋ ಮೂರನೆಯವ-ಮಂಡೆ ಮಾಸಿದವನ ಜೇಬು ದಪ್ಪವಾಗೋದು ಖಚಿತ. ಈ ರೀತಿಯಾಗಿ ದೇವಸ್ಥಾನದ ಸ್ವತ್ತನ್ನ ಹರಾಜ್ ಹಾಕ್ತಿ, ಮಂದಿರವನ್ನ ಉದ್ದಾರ ಮಾಡ್ತೀವಿ ಅನ್ನೋ ಹೆಸರಲ್ಲಿ ಇವ್ರು ನೇರವಾಗಿ ಕಾಣಿಕೆ ಹುಂಡಿಗೆ ಕೈ ಹಾಕಿ ದುಡ್ಡು ಗುಳುಂ ಅನ್ನಿಸೋ ಪಾಪದ ಕೆಲಸ ಮಾಡ್ತಿದ್ದಾರೆ. ವಿಶ್ವದಾದ್ಯಂತ ಪರಿಚಿತವಾದ ಜಗನ್ನಾಥನ ಭಕ್ತಿಧಾಮದಲ್ಲಿ ಇಂತಹ ಪ್ರಮಾದದ ಬೆಳವಣಿಗಿಯ ಕಂಡು ಕೋಟ್ಯಾಂತರ ಭಕ್ತರ ಕಣ್ಣು ಕೆಂಪಾಗಿದೆ, ಮನಸ್ಸು ಕಹಿಯಾಗಿದೆ.

ವರದಿ: P. ಘನಶ್ಯಾಮ್ – ಬೆಂಗಳೂರು

1 Comment

1 Comment

  1. Narayana

    26/03/2021 at 20:11

    Hi Ganasyam

    Very bad news, Indian law as to take series action on this issue. other wise inocent God/people as to die in this country

Leave a Reply

Your email address will not be published.

1 + seventeen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us