“ಎರಡು ಹನಿ ಜೀವಕ್ಕಾಗಿ, ಜೀವನಕ್ಕಾಗಿ” ಎನ್ನುವ ಸಾಲು ಮುಖೇನ ಪೋಲಿಯೋ ಲಸಿಕೆ ಅಭಿಯಾನ ಪ್ರಕಟಣೆಯಾಗುತ್ತೆ

ಸಾಲುಗಳು ಹೇಳುವಂತೆ ನಿಜವಾಗಿಯೂ ಅವು ಜೀವ ಕಾಪಾಡುವ ಜೀವ ಬಿಂದುಗಳು .. ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಮೊನ್ನೆ ನಡೆದ ಪೋಲಿಯೋ ಲಸಿಕೆ ಅಭಿಯಾನದಲ್ಲಿ ವೈದ್ಯರು 12 ಕಂದಮ್ಮಗಳಿಗೆ ಪೋಲಿಯೋ ಲಸಿಕೆ ನೀಡುವ ಬದಲಾಗಿ ಕೈ ಶುದ್ಧಗೊಳಿಸುವ ಸಾನಿಟೈಸರ್ ನೀಡಿದ್ದಾರೆ.ಘಟಾಜಿ ತೆಲ್ಸಿ ಎನ್ನುವ ಜಾಗದಲ್ಲಿನ ಭಾಂಬೊರ ಸರ್ವಜಿನಿಕ ಆರೋಗ್ಯ ಕೇಂದ್ರದಲ್ಲಿ ಇದು ಜರಗಿದ್ದು , ಅಲ್ಲಿನ ವೈದ್ಯಕೀಯ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ತಾವುಗಳು ಮಾಡಿರುವ ಅಚಾತುರ್ಯದ ಬಗ್ಗೆ ಮಧ್ಯಾಹ್ನ 2 ಘಂಟೆ ವೇಳೆಗೆ ಮುಖ್ಯ ವೈದ್ಯರ ಗಮನಕ್ಕೆ ತಂದರು, ತಕ್ಷಣ ಆ 12 ಮಕ್ಕಳ ಪಾಲಕರಿಗೆ ಕರೆ ನೀಡಿ, ಕೂಡಲೇ ಮಾಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವುದಾಗಿ ತಿಳಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. 48 ಘಂಟೆಗಳ ಚಿಕಿತ್ಸೆ -ತಪಾಸಣೆ ಬಳಿಕ ಯಾವ ಮಗುವಿಗೂ ಆರೋಗ್ಯದಲ್ಲಿ ಏರುಪೇರಾಗಿಲ್ಲ, ಎಂಬುದನ್ನ ವೈದ್ಯರು ತಿಳಿಸಿದ್ದಾರೆ. ಅದೇನೇ ಆಗಲಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿವರ್ಗದವರ ಅಸಡ್ಡೆ ಹಾಗೂ ಬೇಜವಾಬ್ದಾರಿಯನ್ನ ಇದು ತೋರಿಸುತ್ತದೆ.ಇವರ ಅಜಾಕೃಕತೆಯಿಂದ ಮಕ್ಕಳ ಜೀವಕ್ಕೆ ಹಾನಿಯಾಗಿದ್ರೆ ಪರಿಣಾಮ ಬಹಳ ಕೆಟ್ಟದಾಗಿರ್ತಿತ್ತು. ಪೊಲೀಸ್ರು ತಕ್ಷಣ F. I.R ದಾಖಲಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ.

ವರದಿ: P. ಘನಶ್ಯಾಮ್ – ಬೆಂಗಳೂರು

WhatsApp us