ಶಿವಮೊಗ್ಗ: ಬೇಳೂರು ಬೈದರೆ ನೀವು ತಡ್ಕೊಳ್ಳೋಕೆ ಆಗಲ್ಲ! ಕೆ.ಎಸ್.ಈಶ್ವರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ಗೆ ಎಚ್ಚರಿಕೆ !? ಸೀರೆ ಊಡಿಸಿದರೇ ಗಂಡಸು ಅಲ್ಲ ಹೆಂಗಸು ಅಲ್ಲ ಎಂದು ಮಾಜಿ ಶಾಸಕ ಹೇಳಿದ್ದು ಯಾರಿಗೆ?
ಶಿವಮೊಗ್ಗದಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ತಮ್ಮ ಪಕ್ಷದ ವರಿಷ್ಟ ರಾಹುಲ್ ಗಾಂಧಿಯವರನ್ನ ನಿಂಧಿಸಿದ್ದರ ಬಗ್ಗೆ ಬಿಜೆಪಿಯ ಕೆಎಸ್ ಈಶ್ವರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ರಿಗೆ ಎಚ್ಚರಿಕೆಯನ್ನು ನೀಡಿದರು.
ನಮ್ಮ ಪಕ್ಷದವರ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಿ, ನೀವು ಹಿರಿಯರಿದ್ದೀರಿ, ನಿಮಗೆ ನಾನು ಬೈಯ್ಯಲು ಹೋಗಲ್ಲ. ಆದರೆ ಇತ್ತೀಚೆಗೆ ನೀವು ನಮ್ಮ ಪಕ್ಷದವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದೀರಿ. ಬೇಳೂರು ಬೈದರೆ ನೀವು ತಡೆದುಕೊಳ್ಳಲಾಗಲ್ಲ ಎಂದು ಎಚ್ಚರಿಸಿದ್ರು. ಹಾಗಾಗಿ ಹಿರಿಯರಾಗಿ ನಿಮ್ಮ ಹೇಳಿಕೆಯನ್ನ ನೋಡಿ ಮಾಡಿ ಕೊಡಿ ಎಂದು ಒತ್ತಾಯಿಸುತ್ತೇನೆ ಎಂದರು.
ಹಿಂದೊಮ್ಮೆ ಬೈಯ್ಯೋದಿದ್ರೆ ಬೇಳೂರು ಬೈತಾರೆ ಅಂತಾ ಹಿಂದೆ ನೀವೆ ಹೇಳಿದ್ದೀರಿ, ಹಾಗಾಗಿ ನೀವು ಎಚ್ಚರಿಕೆಯಿಂದ ಹೇಳಿಕೆ ನೀಡುವುದು ಒಳ್ಳೆಯದು ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನೀವೇ ಮೂಲೆಗುಂಪಾಗುತ್ತೀರಿ ಹುಷಾರಾಗಿರಿ ಎಂದು ಎದುರಾಳಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ ಬೇಳೂರು ಗೋಪಾಲಕೃಷ್ಣ ನಳೀನ್ ಕುಮಾರ್ ಗೆ ಸೀರೆ ಉಡಿಸಿದರೆ, ಅವರು ಗಂಡಸು ಅಲ್ಲ, ಹೆಂಗಸು ಅಲ್ಲ ಎಂದು ವ್ಯಂಗ್ಯವಾಡಿದರು.
ಇಡೀ ಮಂಗಳೂರಿಗೆ ಬೆಂಕಿ ಹಚ್ಚುತ್ತೆನೆ ಎಂದಿದ್ದ ಕಟೀಲು. ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದರು. ಅವರದೇ ಪಕ್ಷದ ನಾಯಕರೆನ್ನಿಸಿಕೊಂಡವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಬಿಜೆಪಿಯಲ್ಲೇ ಅತ್ಯಾಚಾರಿಗಳಿದ್ದಾರೆ. ಅವರೇ ಹಲವು ಸ್ಕ್ಯಾಂಡಲ್ ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಇವೆಲ್ಲದರ ಬಗ್ಗೆ ಗೊತ್ತಿರುವ ಕಟೀಲು, ನಮ್ಮ ಕೇಂದ್ರ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಅವರ ಹೇಳಿಕೆ, ಸರಿಯಲ್ಲ. ಇವರ ಪಕ್ಷದಲ್ಲೇ ಕೊಳೆತು ನಾರುತ್ತಿದೆ ಎಂದು ಟೀಕಿಸಿದ್ರು.
ಮುಖ್ಯಮಂತ್ರಿ ಬೊಮ್ಮಾಯಿಯವರು ನೈತಿಕ ಪೊಲೀಸ್ಗಿರಿ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಬಾರದು ಎಂದು ಸಲಹೆ ನೀಡಿದ್ರು. ಇನ್ನೂ ಇದೇ ವೇಳೆ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಬೇಳೂರು ಗೋಪಾಲಕೃಷ್ಣ. ಅವರ ಪಕ್ಷವೇ ಸರಿಯಾದ ರೀತಿಯಲ್ಲಿ ಇಲ್ಲ. ಅವರಲ್ಲೆ ಪಕ್ಷ ಸಂಘಟನೆ ಇಲ್ಲ. ಇವರು ನಮ್ಮಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಹೆಚ್ಡಿಕೆಗೂ ಎಚ್ಚರಿಕೆ ನೀಡಿದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.