ಹೊಸ ಕೃಷಿ ಕಾನೂನುಗಳು ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ವಿರೋಧ ಪಕ್ಷಗಳು ಅನಗತ್ಯವಾಗಿ ಕಾನೂನುಗಳ ವಿರುದ್ಧ ಸುಳ್ಳು ಪ್ರಚಾರಗಳನ್ನು ಮಾಡುತ್ತಿವೆ ಎಂದು ಗೃಹ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಯಾವುದೇ ನಿಜವಾದ ರೈತ ದೇಶಾದ್ಯಂತ ಕಾನೂನುಗಳನ್ನು ವಿರೋಧಿಸುತ್ತಿಲ್ಲ. ಈ ವರ್ಷದ ಜೂನ್ನಲ್ಲಿ ಆರ್ಡಿನೆನ್ಸ್ ರೂಪದಲ್ಲಿ ಕಾಯಿದೆಗಳ ಅದೇ ನಿಬಂಧನೆಗಳನ್ನು ತಂದಾಗ ವಿರೋಧ ಪಕ್ಷಗಳು ಮೌನವಾಗಿದ್ದವು ಎಂದು ಸಚಿವರು ಮಾಧ್ಯಮಗಳ ಗಮನಸೆಳೆದರು. ಹೊಸ ಮಸೂದೆಗಳು ರೈತರಿಗೆ ಎಂಎಸ್ಪಿ, ಕೃಷಿ ಸಾಲ ಮತ್ತು ಅವರ ಕೃಷಿ ಉತ್ಪನ್ನಗಳಿಗೆ ಬೇಕಾದ ಬೆಲೆಯನ್ನು ಖಚಿತಪಡಿಸುತ್ತದೆ ಎಂದು ಅವರು ರೈತರಿಗೆ ಭರವಸೆ ನೀಡಿದರು.
