ಸಾಗರ: ಸಾಗರ ನಗರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶಾಲೆಗಳಿಗೆ ಭೇಟಿ.

ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರ ಆದೇಶದಂತೆ ನೂತನ ವರ್ಷದಿಂದ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭವಾದ ವಿದ್ಯಾಗಮ ಹಿನ್ನೆಲೆಯಲ್ಲಿ ಸಾಗರ ನಗರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶಾಲೆಗಳಿಗೆ ಭೇಟಿ ನೀಡಿ (ಕೋವಿಡ್ -19) ನಿಯಮಾವಳಿಗಳಾದ ಸಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ತಪಾಸಣೆ, ಮುಂತಾದ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಧೈರ್ಯ ತುಂಬಲಾಯಿತು.

ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾದ ಅಧ್ಯಕ್ಷರು ನಗರಸಭಾ ಸದಸ್ಯರಾದ ತುಕಾರಾಂ ಡಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್, ಸಂತೋಷ ರಾಯಲ್, ರಾಜೇಶ್ ರಾಜೇಶ್ ಶೇಟ್, ರವಿ, ಗಿರೀಶ ಶೇಟ್, ಗಣೇಶ್ ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ

