ಸಾಗರ: ಸಾಗರ ತಾಲ್ಲೂಕಿನಾದ್ಯಂತ 3500ಕ್ಕೂ ಹೆಚ್ಚು ಕೋವಿಡ್ ಲಸಿಕೆ ನೀಡಿಕೆ – ಲಸಿಕಾ ಕೇಂದ್ರದ ಕೋ-ಆರ್ಡಿನೇಟರ್ ಮ.ಸ. ನಂಜುಂಡಸ್ವಾಮಿ.
ಸಾಗರ ತಾಲ್ಲೂಕಿನಲ್ಲಿ ಇಂದು ಕೊವಿಡ್ ಲಸಿಕೆ ನೀಡಲಾಗಿದ್ದು, ಇಂದು ಒಂದೇ ದಿನ ಸುಮಾರು ಮೂರು ಸಾವಿರ ಲಸಿಕೆಯನ್ನು ನೀಡಲಾಗಿದೆ ಎಂದು ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ನೋಡಲ್ ಆಫಿಸರ್
ಡಾ. ವಾಸುದೇವ್’ರವರು ಮೂರನೇಕಣ್ಣು ನ್ಯೂಸ್’ಗೆ ತಿಳಿಸಿದ್ದಾರೆ.
ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಲಸಿಕಾ ಕೇಂದ್ರದ ಕೋ-ಆರ್ಡಿನೇಟರ್ ಮ.ಸ. ನಂಜುಂಡಸ್ವಾಮಿ ಲಸಿಕೆ ನೀಡಿದ ವಿವರ ಹೀಗಿದೆ.
ಸಾಗರದ ದೇವರಾಜು ಅರಸು ಭವನದಲ್ಲಿ ಇಂದು 747ಲಸಿಕೆಗಳನ್ನು, ಎಸ್.ಎನ್. ನಗರದ ಆಶ್ರಮಶಾಲೆಯಲ್ಲಿ 622, ಶ್ರೀಧರ ನಗರದ ಶಾಲೆಯಲ್ಲಿ 423, ಬೆಳಲಮಕ್ಕಿ ಶಾಕಯಲ್ಲಿ 385 ಹಾಗೂ ಇನ್ನುಳಿದಂತೆ ಗ್ರಾಮೀಣ ಭಾಗದಲ್ಲಿ ಸಹ ವಿವಿಧ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜು ಬಿ. ಮಡಿವಾಳ ಇವರು ಲಸಿಕಾ ಕೇಂದ್ರಕ್ಕೆ ಬರುವ ವಯಸ್ಸಾದವರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ಇನ್ನುಳಿದಂತೆ ಈ ಸಂದರ್ಭದಲ್ಲಿ ಪರಶುರಾಮ, ಜಯರಾಮ, ಸ್ಟಾಪ್ ನರ್ಸ್ ಪವಿತ್ರ, ರಂಜಿತ, ಸಂತೋಷ್, ಅಭಿಷೇಕ, ಮಲ್ಲಿಕಾರ್ಜುನ್, ಸುಪ್ರೀತ್, ಉದಯಕುಮಾರ್ ಕುಂಸಿ, ಅಶೋಕಣ್ಣ, ದಿನೇಶ್ ಆರಕ್ಷಕ ಸಿಬ್ಬಂದಿ ಕೃಷ್ಣಪ್ಪ, ಪ್ರೇಮ್, ಆಶಿತಾ, ವಿಜಯ್, ಸೋಮಶೇಖರ, ಹಾಜರಿದ್ದು ಲಸಿಕಾ ಅಭಿಯಾನದ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಅಲ್ಲದೇ ಸಾಗರದ ಸಿದ್ದೇಶ್ವರ ಶಾಲೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಸಹ ನೀಡಲಾಗಿದೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
