ಸಾಗರ: ಸಮಯಕ್ಕೆ ಸರಿಯಾಗಿ 2ನೇ ಹಂತದ ಲಸಿಕೆ ಪಡೆಯದಿದ್ದರೆ ಯಾರಿಗೂ ಅದರಿಂದ ಪ್ರಯೋಜನವಿಲ್ಲ – ತಶ್ರೀಫ್ ಸಿಟಿ ಮುನಿಸಿಪಲ್ ಕೌನ್ಸಿಲ್ ಸಾಗರ.

ಸಾಗರದಲ್ಲಿ ಎರಡನೇ ಹಂತದ ಲಸಿಕೆ ಸರಿಯಾದ ಸಮಯದಲ್ಲಿ ಸಿಗದಿರುವ ಕಾರಣ ಅನೇಕ ಜನರು ಪರದಾಡುವಂತಹ ಸ್ಥಿತಿ ಉಂಟಾಗಿದೆ. ಲಸಿಕೆ ಕೊರತೆಯಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಫೋನ್ ಮೂಲಕ ತಿಳಿಸಿದರೆ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ವಾಪಾಸಾಗುವುದು ತಪ್ಪುತ್ತದೆ.

ಎರಡುವರೆ ಲಕ್ಷ ಜನಸಂಖ್ಯೆ ಹೊಂದಿರುವ ಸಾಗರದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿದೆ ಕೊರೊನಾ ಸೋಂಕು, ಇದನ್ನು ಗಮನದಲ್ಲಿಟ್ಟು ಮುಂಜಾಗ್ರತೆಯಾಗಿ 500 ಆಕ್ಸಿಜನ್ ಬೆಡ್ ಆದರೂ ತಯಾರಿರಬೇಕು ಎಂದು ತಶ್ರೀಫ್ ಸಾಗರ ಶಾಸಕರಾದ ಹೆಚ್ ಹಾಲಪ್ಪ ಹರತಾಳು ಅವರ ಗಮನಕ್ಕೆ ತಂದರು.
ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ (ಪ್ರತ್ಯಕವಾಗಿ) ಮಾಡಿರುವುದರಿಂದ ಹೆಚ್ಚು ಸಿಬ್ಬಂದಿ ಅವಶ್ಯಕತೆಯಿದೆ ಶೀಘ್ರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಕ್ರಮ ಕೈಗೊಳ್ಳುವಂತೆ ತಶ್ರೀಫ್ವಿ ನಂತಿಸುತ್ತಿದ್ದಾರೆ.

ವರದಿ: ಸಿಸಿಲ್ ಸೋಮನ್
