ಬೆಂಗಳೂರು: ಬಿಜೆಪಿ ಸರ್ಕಾರದ್ದು ಜನರ ಜೇಬಿಗೆ ಕೈಹಾಕುವ ಕಾರ್ಯಕ್ರಮವೇ ಹೊರತು, ಅವರ ಜೀವ ಉಳಿಸುವುದಲ್ಲ – ಡಿ.ಕೆ ಸುರೇಶ್.
ಬಿಜೆಪಿ ಸರ್ಕಾರದ್ದು ಜನರ ಜೇಬಿಗೆ ಕೈ ಹಾಕುವ ಕಾರ್ಯಕ್ರಮವೇ ಹೊರತು, ಅವರ ಜೀವ ಉಳಿಸುವ ಕಾರ್ಯಕ್ರಮವಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ವಿಧಾನಸಭೆ ಕ್ಷೇತ್ರ ಬೈರಮಂಗಲದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಅವರು, ‘ಬಿಜೆಪಿ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳ ಮಾಡಿದೆ’ ಎಂದು ಹರಿಹಾಯ್ದರು.
ಒಟ್ಟಾರೆ ಅವರು ಹೇಳಿದ್ದಿಷ್ಟು:
‘ಕೋವಿಡ್ 2ನೆ ಅಲೆಯನ್ನು, ಇದು ಸಾಕಷ್ಟು ಜನರ ಜೀವ ಬಲಿ ಪಡೆದಿರುವುದನ್ನು ನಾವೆಲ್ಲ ನೋಡಿದ್ದೇವೆ.
ಆಶಾ ಕಾರ್ಯಕರ್ತೆಯರು, ಆರೋಗ್ಯ ಸೇವಕರು ತಮ್ಮ ಜೀವ ಪಣಕ್ಕಿಟ್ಟು, ಮಳೆ-ಬಿಸಿಲು ಲೆಕ್ಕಿಸದೆ, ನಿತ್ಯ ಮನೆ-ಮನೆಗೆ ಹೋಗಿ ಜನರ ಸಮಸ್ಯೆ, ಅವರ ಆರೋಗ್ಯ ವಿಚಾರಿಸಿದ್ದೀರಿ. ನಿಮಗೆ ಪ್ರೋತ್ಸಾಹ ನೀಡುವುದು ನಮ್ಮ ಹಾಗೂ ಸರ್ಕಾರದ ಕರ್ತವ್ಯ.
ಪಂಚಾಯ್ತಿಯಿಂದ ಹಿಡಿದು ಜಿಲ್ಲಾ ಕಚೇರಿ ಅಧಿಕಾರಿಗಳವರೆಗೆ ಯಾರೂ ಹೊರಬಂದು ಕೆಲಸ ಮಾಡಲು ಸಿದ್ಧರಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸರಕಾರ ವಿಫಲವಾಗಿದೆ.
ಈ ಸಮಯದಲ್ಲಿ ರೋಗಿಯನ್ನು ಮಾತನಾಡಿಸಲು ಪ್ರಧಾನಿಗಳಿಂದ ಹಿಡಿದು ಸಂಸದರು, ರಾಜಕೀಯ ನಾಯಕರವರೆಗೆ ಎಲ್ಲರಲ್ಲೂ ಭಯ.
ಎಲ್ಲರಿಗೂ ಪೂರ್ಣವಾಗಿ ಲಸಿಕೆ ನೀಡಲು ಇನ್ನು ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೂ ನಾವೆಲ್ಲರೂ ಸುರಕ್ಷಿತವಾಗಿರಬೇಕು. ಸರ್ಕಾರ ಏನಾದರೂ ಮಾಡುತ್ತದೆ ಎಂದು ಭಾವಿಸಿದ್ದರೆ ಅದು ಸುಳ್ಳು. ಅವರು ಖಂಡಿತಾ ಏನನ್ನೂ ಮಾಡುವುದಿಲ್ಲ. ಸರ್ಕಾರ ತನ್ನ ಬೊಕ್ಕಸ ತುಂಬಿಕೊಳ್ಳಲು ಜನರ ಜೇಬಿಗೆ ಕೈ ಹಾಕುತ್ತಿದೆ ಅಷ್ಟೇ.
ನಿಮ್ಮೆಲ್ಲರ ಸೇವೆಗೆ ನಾನು ನಮಸ್ಕರಿಸುತ್ತೇನೆ. ನಿಮ್ಮ ಸೇವೆ ಹೀಗೆ ನಿರಂತರವಾಗಿರಲಿ. ನಾವು ಸದಾ ನಿಮ್ಮ ಜತೆ ನಿಲ್ಲುತ್ತೇವೆ. ನಿಮಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತೇವೆ.’

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
