ಬೆಂಗಳೂರು: ನಾಳೆಯಿಂದ 15 ದಿನಗಳ ಕಾಲ ರಾಜ್ಯದಲ್ಲಿ ಲಾಕ್ದೌನ್.
ಕೊರೊನಾ ಸೋಂಕಿನ ಎರಡನೆ ಅಲೆಯ ತೀವ್ರತೆ ರಾಜ್ಯಾದ್ಯಂತ ಹೆಚ್ಚುತ್ತಿರುವ ಕಾರಣ ಇಂದು ಮುಖ್ಯಮಂತ್ರಿಗಳಾದ ಬಿ. ಎಸ್. ಎಡ್ಯೂರಪ್ಪನವರು ತಮ್ಮ ಕ್ಯಾಬಿನೆಟ್ ಸದಸ್ಯರೊಂದಿಗೆ ಉನ್ನತ ಮಟ್ಟದ ತುರ್ತು ಸಭೆಯನ್ನ ನಡೆಸಿದರು, ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಶಾಸಕರು ಹಾಗೂ ಮಂತ್ರಿ ಮಂಡಲದವರು ಒಮ್ಮತದಿಂದ ಲಾಕ್ದೌನಿನ ಅಗತ್ಯ ಹಾಗೂ ಸೋಂಕನ್ನ ತಡೆಯಲು ಸಾಧ್ಯಕ್ಕೆ ಅದುವೇ ರಾಮಬಾಣವೆಂಬ ಒಮ್ಮತದ ನಿರ್ಣಯ ಹೊರಬಂದಿದೆ. ಸಭೆಯ ನಂತರ ಪತ್ರಿಕಾಘೋಷ್ಟ್ರಿಯಲ್ಲಿ ವಿವರ ತಿಳಿಸಿದ ಯೆಡ್ಯುರಪ್ಪ ಮುಂದಿನ ದಿನಗಳಲ್ಲಿ ಯಾವಲ್ಲಾ ಸೌಲಭ್ಯ ಸೇವೆಗಳು ಲಭ್ಯವಿರುವುದಾಗಿ ಪಟ್ಟಿ ನೀಡಿದರು, ಅದರ ಪ್ರಕಾರ ಯಾವುದೇ ಬಸ್(KSRTC BMTC), ಮೆಟ್ರೋ ಅಥವಾ ಸಾರ್ವಜನಿಕ ವಾಹನಗಳು ಇರುವುದಿಲ್ಲಾ, ಬೆಳಗ್ಗೆ 6-10ರ ವರೆಗೂ ದಿನನಿತ್ಯ ಬೇಕಾಗುವ ಹಾಲು, ಅಡುಗೆ ಸಾಮಗ್ರಿ ಮತ್ತು ತರಕಾರಿ ಅಂಗಡಿಗಳು ಮಾತ್ರ ತೆರೆದಿರುತ್ತದೆ, ಮಿಕ್ಕವೆಲ್ಲಾ ಸಂಪೂರ್ಣ ಬಂದು. ಸಾಮಾನ್ಯರು, ವರ್ತಕರು ಹಾಗೂ ಉದ್ಯಮಿಗಳು ಇದಕ್ಕೆ ಬೆಂಬಲ ಮತ್ತು ಸಹಕಾರ ನೀಡಿ, ನಿಯಮಗಳನ್ನು ಪಾಲಿಸಿದಾಗಲೇ ಕೋವಿಡ್ ನಿಯಿಂತ್ರಣ ಸಾಧ್ಯ, ಪಕ್ಕದ ರಾಜ್ಯಾಗಳಿಗೆ ನಾವು ಮಾದರಿಯಾಗಲು ಸಾಧ್ಯವೆಂದ್ರು. ಮುಖ್ಯ್ಮಂತ್ರಿಗಳು ಇದನ್ನ ” ಕೋವಿಡ್ ಕರ್ಫ್ಯೂ” ಎಂದರು.

ಮೇ 1ರಿಂದ 18-45, ವಯಸ್ಸಿ ನವರಿಗೆ ಕರ್ನಾಟಕ ರಾಜ್ಯದಲ್ಲಿನ ಗೌರ್ಮೆಂಟ್ ಆಸ್ಪತ್ರೆಗಳಲ್ಲಿ ಕೋವಿಡ್ 19 ರ ಲಸಿಕ ಉಚಿತವಾಗಿ ದೊರೆಯಲಿದೆ ಎಂದು ಘೋಷಿಸಿದರು.

ವರದಿ: P. ಘನಶ್ಯಾಮ್ – ಬೆಂಗಳೂರು

