ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಆಸ್ತಿ ತೆರಿಗೆ ಏರಿಕೆ ಕಾಂಗ್ರೆಸ್ ವತಿಯಿಂದ ಭಾರೀ ಪ್ರತಿಭಟನೆ.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯು ಪ್ರತಿ 3.ವರ್ಷಕ್ಕೊಮ್ಮೆ ತೆರಿಗೆಯನ್ನು ಶೇಕಡವಾರು ಏರಿಕೆ ಮಾಡುವುದು ನಿಯಮ .ತೆರಿಗೆದಾರರ ಮತ್ತು ಸ್ಥಳೀಯ ನಾಗರಿಕರ ಹಾಗೂ ಪಟ್ಟಣ ಪಂಚಾಯ್ತಿ ಚುನಾಯಿತ ಸದಸ್ಯರ ಅಭಿಪ್ರಾಯ ಪಡೆದು ಸಾರ್ವಜನಿಕ ಪ್ರಕಟಣೆ ನೀಡಿ ತೆರಿಗೆಯನ್ನೂ ಏರಿಸಿರುವುದು ಹಿಂದಿನ ನಿಯಮವನ್ನು ಮೀರಿ.
ಈ ಬಾರಿ ಏಕಪಕ್ಷೀಯವಾಗಿ ಹಾಲಿ ತೆರಿಗೆಯ 3ಪಟ್ಟು ಹೆಚ್ಚು ತೆರಿಗೆಯನ್ನು ವಿಧಿಸಿರುವುದು ಖಂಡನೀಯ ಎಂಬುದಾಗಿ ಇಂದು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ವತಿಯಿಂದ ಆಯ್ಕೆಯಾದ 9.ಸದಸ್ಯರು ತಾಲ್ಲೂಕು ಕಚೇರಿ ಎದುರು ಬಾರಿ ಪ್ರತಿಭಟನೆಯನ್ನೂ ನಡೆಸಿದರು .ಸೊಪ್ಪುಗುಡ್ಡೆ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದು ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ಡಾ॥. ಎಸ್ .ಪಿ
ಶ್ರೀಪಾದ ರವರಿಗೆ ಮನವಿ ಯನ್ನು ನೀಡಿ ಸರಕಾರಕ್ಕೆ ತಲುಪಿಸಲು ವಿನಂತಿಸಿಕೊಳ್ಳಲಾಯಿತು .

ಪ್ರತಿಭಟನಾ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮಾಜಿ ಅಧ್ಯಕ್ಷ ರಹಮತುಲ್ಲಾ ಅಸಾದಿ ,ಜಯಪ್ರಕಾಶ್ ಶೆಟ್ಟಿ .ಬಿ ಗಣಪತಿ. ಸುಶೀಲಾ ಶೆಟ್ಟಿ. ಗೀತಾ ರಮೇಶ್ .ಶಬನಮ್. ರತ್ನಾಕರ ಶೆಟ್ಟಿ ನಮೃತಾ ಮಂಜುಳಾ ಅವರುಗಳು ಭಾಗವಹಿಸಿದ್ದರು .ಪ್ರತಿಭಟನಾ ಸಭೆಯಲ್ಲಿ ಮಾಜಿ ಅಧ್ಯಕ್ಷ ರಹಮತುಲ್ಲಾ ಅಸಾದಿ ,ಡಿ ಎಸ್ ವಿಶ್ವನಾಥ ಶೆಟ್ಟಿ ,ಬಿ ಗಣಪತಿ, ಗೀತಾ ರಮೇಶ್, ಶಬನಮ್ ತೆರಿಗೆಯನ್ನು ಏರಿಸಿದ್ದನ್ನು ಖಂಡಿಸಿ ಮಾತನಾಡಿದರು .ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಾಳೇಹಳ್ಳಿ ಪ್ರಭಾಕರ್ ,ಅಮ್ರಪಾಲಿ ಸುರೇಶ್, ಬಾಳೆಬೈಲು ರಾಘವೇಂದ್ರ ಶೆಟ್ಟಿ ,ಯುವ ಕಾಂಗೈ ಅಧ್ಯಕ್ಷ ಅಮರನಾಥ ಶೆಟ್ಟಿ, ಮಿಲ್ಕ್ ಕೇರಿ ಹರೀಶ್, ಕುಶಾವತಿ ವಿಜಯ ಇನ್ನಿತರ ನಾಯಕರು ಉಪಸ್ಥಿತರಿದ್ದರು .ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ಅವರು ಮನವಿಯನ್ನು ಸರಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು .

ವರದಿ: ಲಿಯೋ ಅರೋಜ ತೀರ್ಥಹಳ್ಳಿ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
