ಸಾಗರ: ಕೋವಿಡ್-19 ಕೊರೋನಾ ಪಾಸಿಟಿವ್ ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೆಯ ಸ್ಥಾನದಲ್ಲಿ ಸಾಗರ.

ಶಿವಮೊಗ್ಗದಲ್ಲಿ ಕೈಬಿಟ್ಟು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮೆಗ್ಗಾನ್ ನಲ್ಲಿ ಸೋಂಕಿತರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಂಟಿಲೇಟರ್ ರೆಮಿಡಿ ಸಿರಿ ಅಗತ್ಯ ಔಷಧಿಗಳ ಪೂರೈಕೆ ಇದೆ. ವೈದ್ಯರು ಹಾಗೂ ಸಿಬ್ಬಂದಿಗಳು ಸತತವಾಗಿ ಶ್ರಮಿಸುತ್ತಿದ್ದಾರೆ.
ಕಳೆದ ಬಾರಿ ವೃದ್ಧರಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಾಣಿಸಿಕೊಂಡಿತ್ತು, ಆದರೆ ಎರಡನೆಯ ಬಾರಿ ಅಲೆಯಲ್ಲಿ 30 ಮತ್ತು 40 ವಯಸ್ಸು ಯುವಕರನ್ನು ಸೋಂಕು ಕಾಣಿಸಿಕೊಳ್ಳುತ್ತಿದೆ.
ಶಿವಮೊಗ್ಗ ಜಿಲ್ಲೆಯಿಂದ 755 ಕೊರೋನಾ ಪಾಸಿಟಿವ್. ಜಿಲ್ಲೆಯಲ್ಲಿ 755 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ 2676 ಮಂದಿಯ ಸ್ಯಾಂಪಲ್ ಸಂಗ್ರಹಿಸಿದ್ದು,2516 ಮಂದಿಯ ವರದಿ ನೆಗೆಟಿವ್ ಬಂದಿದ್ದು. 468 ಮಂದಿ ಮಂದಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲಾ ಕೋವಿ ಪೋಸಿಟಿವ್ : ಶಿವಮೊಗ್ಗ 221, ಭದ್ರಾವತಿ 103, ಶಿಕಾರಿಪುರ 67, ತೀರ್ಥಹಳ್ಳಿ 108, ಸೊರಬ 82, ಹೊಸನಗರ 33, ಸಾಗರ 117.

ವರದಿ: ಸಿಸಿಲ್ ಸೋಮನ್

