ಯಾವುದೇ ಚುನಾವಣೆಗಳು ನಡೆದರೂ ಅದರಲ್ಲಿ ಬಿಜೆಪಿಯೇ ಗೆಲ್ಲುವುದು. ಶಿರಾ ಮತ್ತು ಆರ್ಆರ್ ನಗರದಲ್ಲೂ ನಮ್ಮ ಗೆಲುವು ಖಚಿತ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಘೋಷಣೆಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಈ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ನಿಶ್ಚಿತ. ಚುನಾವಣೆಯೆಂದರೆ ಅದು ಬಿಜೆಪಿಯ ಗೆಲುವು ಎಂದೇ ಅರ್ಥ. ಬೇಕಿದ್ದರೆ ಬರೆದಿಟ್ಟುಕೊಳ್ಳಿ, ಶಿರಾ ಮತ್ತು ಆರ್ಆರ್ ನಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಎರಡು ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿಯದ್ದೇ ಗೆಲುವು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇತ್ತೀಚೆಗೆ ನಡೆದ 15 ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ಗೆದ್ದಿತ್ತು. ಹಾಗಾಗಿ, ಯಾವುದೇ ಚುನಾವಣೆಗಳು ನಡೆದರೂ ಅದರಲ್ಲಿ ಬಿಜೆಪಿಯೇ ಗೆಲ್ಲುವುದು. ಶಿರಾ ಮತ್ತು ಆರ್ಆರ್ ನಗರದಲ್ಲೂ ನಮ್ಮ ಗೆಲುವು ಖಚಿತ ಎಂದು ಹೇಳಿದ್ದಾರೆ.
