ಬೆಂಗಳೂರು: ಆಕ್ಸಿಜನ್ ಹಾಗೂ ವೆಂಟಿಲೇಟರ್ ದೊರಕದೆ ಮುಗ್ಧರು ಸಾವನ್ನಪ್ಪುತ್ತಿದ್ದಾರೆ – ಎಂ.ಎ ಸಲೀಂ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ವೈರಾಣುವಿನಿಂದ ದಿನನಿತ್ಯ ಮುಗ್ಧ ಜನರು ಸಾವನ್ನಪ್ಪುತ್ತಿದ್ದಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಆಕ್ಸಿಜನ್ ಹಾಗೂ ವೆಂಟಿಲೇಟರ್ ದೊರಕದೆ ಮುಗ್ಧರು ಸಾವನ್ನಪ್ಪುತ್ತಿದ್ದಾರೆ ಚಾಮರಾಜ ನಗರದಲ್ಲಿ ನಡೆದಿರುವ ಈ ದಾರುಣ ಘಟನೆಗೆ ಕೂಡಲೇ ಸರಕಾರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ ತೊಲಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಇವರಿಂದ ರಾಜ್ಯದ ಜನರಿಗೆ ಆರೋಗ್ಯ ನೀಡಲು ಸಾಧ್ಯವೇ, ಇನ್ನು ಅನಾರೋಗ್ಯ ಸಚಿವ ಸುಧಾಕರ್ ಅತ್ಯಂತ ದುರಹಂಕಾರಿ ತನ್ನ ಸಚಿವ ಸಂಪುಟದ ಸಹೋದ್ಯೋಗಿಗಳೇ ಸುಧಾಕರ್ ವರ್ತನೆಯನ್ನು ದೂರುತ್ತಿದ್ದಾರೆ ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂಬುವ ಆರೋಪ ನಿತ್ಯವೂ ಕೇಳಿಬರುತ್ತಿದೆ ಹಾಗೂ ಸೂಕ್ತ ರೀತಿಯಲ್ಲಿ ರೋಗ ತಡೆಯಲು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವ ಇಂತಹ ಬೇಜವಾಬ್ದಾರಿ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು.
ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಸಹ ನಿರ್ಲಕ್ಷ್ಯತನ ತೋರಿದರೆ ಅವರು ಮೈಸೂರು ಜಿಲ್ಲಾ ಅಧಿಕಾರಿ ಶ್ರೀಮತಿ.ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪವನ್ನು ಹೊರಿಸಿದ್ದಾರೆ ಜನರ ಸಮಸ್ಯೆಗೆ ಹಾಗೂ ಆರೋಗ್ಯಕ್ಕೆ ಒತ್ತು ನೀಡದ ಇಂತಹ ಬೇಜವಾಬ್ದಾರಿ ಜಿಲ್ಲಾಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು.
ಜನರು ಸಂಕಷ್ಟದಲ್ಲಿ ನರಳುತ್ತಿದ್ದರೆ ಅಧಿಕಾರಿಗಳು ದರ್ಪದಲ್ಲಿ ಮೆರೆಯುತ್ತಿದ್ದರೆ ಈ ಸರಕಾರಕ್ಕೆ ಕಣ್ಣು ಕಿವಿ ಮಾನವೀಯತೆ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರವಾಗಿದೆ ನರೇಂದ್ರಮೋದಿ ಪ್ರಚಾರದಲ್ಲಿ ಮುಳುಗಿದ್ದರೆ ರಾಜ್ಯದಲ್ಲಿ ಕೆಲವು ಮಂತ್ರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಬಿಜೆಪಿ ಸರಕಾರದ ಮಂತ್ರಿಗಳಿಗೆ ಜನರ ನೋವು ಕಾಣುತ್ತಿಲ್ಲ ಇಂತಹ ಸರ್ಕಾರ ಕೂಡಲೇ ತೊಲಗಬೇಕೆಂದು ಹಾಗೂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವ ನೈತಿಕತೆ ಆರೋಗ್ಯ ಸಚಿವ ಸುಧಾಕರ್ ಗೆ ಇಲ್ಲ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ವಜಾಗೊಳಿಸಬೇಕು ಹಾಗೂ ಮುಗ್ಧರ ಸಾವಿಗೆ ಕಾರಣರಾಗಿರುವವರನ್ನ ಕೊಲೆ ಆರೋಪದಡಿ ಬಂಧಿಸಬೇಕು ಎಂದು ಸಾರ್ವಜನಿಕರ ಕೂಗಾಗಿದೆ, ಇದನ್ನು ಕೂಡಲೇ ಸರ್ಕಾರ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೌನ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಮಾಜಿ ಕವಿಕ ಅಧ್ಯಕ್ಷರಾದ ಎಸ್ ಮನೋಹರ್. ಎಂ.ಎ ಸಲೀಂ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ,.ಎ ಆನಂದ್. ಪುಟ್ಟರಾಜುರವರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
