ಬೆಂಗಳೂರು: ಅಜೀಮ್ ಪ್ರೇಮ್ ಜಿ, ಡಾ. ದೇವಿ ಶೆಟ್ಟಿ ಮತ್ತು ಕಿಚ್ಚಾ ಸುದೀಪ್ ಅವರಿಗೆ ಬಂಗಳೂರರು ಪ್ರೆಸ್ ಕ್ಲಬ್ ವತಿಯಿಂದ ಪ್ರಶಸ್ತಿ – ಸನ್ಮಾನ.
“ಪ್ರೆಸ್ ಕ್ಲಬ್ ಆಫ್ ಬೆಂಗಳೊರು” ಪ್ರತಿವರ್ಷ ಓರ್ವ ಸಾಧಕನನ್ನ ಗುರುತಿಸಿ ಅವರಿಗೆ ” ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ” ಪ್ರಶಿಸ್ತಿಯನ್ನ ನೀಡಿ ಸನ್ಮಾನಿಸಲಾಗುವುದು. ಈ ಪ್ರಶಸ್ತಿಗೆ ಭಜನರಾದವರು ಅವರ ಕರ್ಮಭೂಮಿಯಲ್ಲಿ ಅಪಾರ ಸಾಧನೆ ಗೈದಿರುವುದರೋಂದಿಗೆ ಸಮಾಜಕ್ಕು ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ. ಈ ಸಾಲಿನ ಪ್ರಶಸ್ತಿಯನ್ನ ಭಾರತದ ಹೆಸರಾಂತ ಕಂಪನಿ ವಿಪ್ರೋದ ಸಂಸ್ಥಾಪಕರು ಹಾಗು ಮಾಲೀಕರೂ ಆದ್ ಶ್ರೀ “ಅಜೀಮ್ ಪ್ರೇಮ್ ಜಿ” ಅವರ ರಿಗೆ ಸಲ್ಲಲಿದೆ.

ಬಾಂಬೆ ಮೂಲದ ಉದ್ಯಮಿಯಾದ ಪ್ರೇಂಜಿಯವರು ಈ ದೇಶ ಕಂಡಂತಹ ಅತ್ಯಂತ ಪ್ರಭಾವಿ ಉದ್ಯಮಿಗಳಲೊಬ್ಬರು, ಯಾವ ದೊಡ್ಡ ಹಿನ್ನೆಲೆ ಇಲ್ಲದ ಸಾಧಾರಣ ವ್ಯಕ್ತಿಯಾಗಿದ್ದ ಪ್ರೇಮಜಿ, ಜೀವನದ ಓಟದಲ್ಲಿ ಗೆಲ್ಲಲೇ ಬೇಕೆಂದು ತೀರ್ಮಾ ನಿಸಿದಗಾ ಶ್ರಮದ ಜೊತೆಗೆ ಆಶಾಭಾವನೆಯನ್ನ ಬೆನ್ನಿಗೆ ಅಂಟಿಸಿಕೊಂಡು I.T ಕ್ಷೇತ್ರದಲ್ಲಿ ಪಯಣ ಆರಂಭಿಸಿದರು,ಆ ಓಟದಲ್ಲಿ ಅವ್ರು ಗೆಲ್ಲುವುದರ ಜೊತೆಗೆ ಹಲವರನ್ನ ಜೊತೆಯಲ್ಲಿ ಕರೆದೊಯ್ದರು. ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಅವರಿಟ್ಟ ಅಡಿಪಾಯ ಇಂದು ಬೃಹತ್ ಕೋಟೆಯಾಗಿದೆ, ವಿದ್ಯಾವಂತ ಪರಂಪರೆಗೆ ಅವರಿತ್ತ ಅಕ್ಷಯದ ಆಸರೆ ಎಂದೂ ಮಾಸದ ಅವರ ಉತ್ಕೃಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
2020ನೆ ಇಸವಿಯಲ್ಲಿ ಕೊರೊನ ವಿರುದ್ಧ ಹೋರಾಟಕ್ಕೆ ಮತ್ತು ಇನ್ನಿತರೆ ಸಂಕಷ್ಟಗಳನ್ನು ಎದುರಿಸಲು ಬರೋಬ್ಬರಿ 8000 ಕೋಟಿ ರೂಪಾಯಿಗಳನ್ನ ದಾನವಾಗಿ ನೀದಿದ್ದಾರು. 75ನೆ ವಯಸ್ಸಿನಲ್ಲಿ ಅವರು ಯೋಚಿಸುವ ಪರಿ ಮತ್ತು ದೇಶದ ಪ್ರಗತಿಗಾಗಿ ಕೈಗೊಳ್ಳುತ್ತಿರುವ ನಿರ್ಣಯಗಳು ಮುಂದಿನ ನೂರು ಪೀಳಿಗೆಗು ಆದರ್ಶಮಾರ್ಗವಾಗಿರುತ್ತದೆ.

“ಹೃದಯವಂತ” ಅಂದ್ರೆ ಯಾರು? ಅಂತ ಕೇಳಿದ್ರೆ ಅದಕ್ಕೆ ನಮ್ಮ ಉತ್ತರ ಇದಾಗಿರುತ್ತೆ, ವಿಶಾಲ್ ಹೃದಯ ಉಳ್ಳವನು ಅಥವಾ ಹೃದಯ ಶ್ರೀಮಂತಿಕೆ ಇರವವನು. ಅದಕ್ಕೊಂದು ನಿದರ್ಶನವಾಗಿ ಇಲ್ಲೊಬ್ಬರು ತಮ್ಮ ಬದುಕನ್ನು ರೂಪಾಸಿಕೊಂಡಿದ್ದಾರೆ, ಲಕ್ಷಾಂತರ ಜನರ ಹೃದಯಕ್ಕೆ ಸಂಬಂಧಿತ ಸಮಸ್ಯೆಗಳನ್ನ ನಿವಾರಿಸಿದ ವೈದ್ಯನಾರಾಯಣ ಇವರು… ನಾರಾಯಣ ಹೃದಯಾಲಯಾದ ಮುಖ್ಯ ನಿರ್ದೇಶಕರು ಹಾಗೂ ಹೃದಯ ತಜ್ನ್ಯರಾದ ಡಾ.ದೇವಿ ಶೆಟ್ಟಿಯವರು. ಆಟಲ ಬಿಹಾರಿ ವಾಜಪೆಯಿ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ(2003-2004) ಪ್ರಾರಂಭಗೊಂಡ ” ಯಶಸ್ವಿನಿ ಸಹಕಾರ ಸಿಂಧು” ಯೋಜನೆ ಅಡಿಯಲ್ಲಿ ಭಾರತದಾದ್ಯಂತ ಲಕ್ಷಾಂತರ ಗ್ರಾಮೀಣ ಭಾಗದ ಜನರಿಗೆ ಕೇವಲ 5 ರೂಪಾಯಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ (cardiac surgery) ನೆರವೇರಿಸಿದ ಹೆಗ್ಗಳಿಕೆ ಡಾ. ದೇವಿ ಶೆಟ್ಟಿಯವರಿಗೆ ಸಲ್ಲುತ್ತದೆ. ಇವರ ಕೌಶಲ್ಯತೆ, ಪಾರ್ದರ್ಶಕತೆಯನ್ನು ಶ್ಲಾಘಿಸಿ ಖುದ್ದು ವಾಜಪೇಯಿ ಅವ್ರೇ ಪ್ರಶಂಸಾ ಪತ್ರ ನೀಡಿದ್ರು. ಸರ್ಕಾರದ್ದಲ್ಲದ ಖಾಸಗಿ ಸಂಸ್ಥೆಯೊಂದು(research institute) ಹೃದಯಕ್ಕೆ ಸಂಭಂದಿಸಿದ ಖಾಯಿಲೆ ನೋವೋಗಳನ್ನ ,ಅತಿ ಕಡಮೆ ದರದಲ್ಲಿ ಸಮರ್ಥವಾಗಿ ನಿವಾರಿಸುವ “ಸಂಜೀವಿನಿ” ಎಂದು ವಿಶ್ವದಾದ್ಯಂತ ಪ್ರಖ್ಯಾತವಾಗಿದೆ, ಇದು ಇತಿಹಾಸದ ಪುಟವನ್ನ ಸೇರಿ ಎಲ್ಲರಿ ಅರಿವಿಗು ಬಂದಿರುವ ವಿಷಯ. ಈಚೆಗೆ ಕೊರೊನಾದಿಂದ ಉದ್ಭವವಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಾ. ದೇವಿ ಶೆಟ್ಟಿಯವರು ಮಾರ್ಗದರ್ಶಿಯಾಗಿದ್ದುರ್ ಅವರು ನೀಡಿದ ಸಲಹೆಗಳನ್ನ ಪಾಲಿಸಿದ ಕಾರಣ ಹಲವು ಅವಘಡಗಳು ದೂರಾದವು. ಸಲಹೆಯ ಜೊತೆಗೆ ಸಹಾಯ ಹಸ್ತ ಕೋಡ ಚಾಚಿದ್ರು..ಉಚಿತವಾಗಿ ವೆಂಟಿಲೆಟರ್ಗಳು, ಬೆಡ್ಸ್, ಅವಶ್ಯಪಡುವ ಔಷಧಿ ಮತ್ತು ಮೆಡಿಕಲ್ ಸಪ್ಲಿಮೆಂಟ್ಸ್ ಗಳನ್ನ ದೊಡ್ಡ ಪ್ರಮಾಣದಲ್ಲಿ ಪೂರೈಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಇವರು ಮಕುಟದಂತೆ ಇವರನ್ನ ಪಡೆದದ್ದು ನಮ್ಮಗಳ ಅದೃಷ್ಟವೆ ಸರಿ.
ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಭಾರತದಾದ್ಯಂತ ಪ್ರೀತಿ ಅಭಿಮಾನ ಗಳಿಸಿರುವ ಪ್ರತಿಭಾವಂತ ಪ್ರಭಾವಿ ಕಲಾವಿದರು ಕಿಚ್ಚಾ ಸುದೀಪ್, ಸಿನಿಮಾಗಳಲ್ಲಿ ನಾಯಕನಾಗಿ, ಕಿರುತರೆ ಕಾರ್ಯಕ್ರಮದ ನಿರೂಪಕನಾಗಿ ಕ್ರಿಯಾಶೀಲತೆಯನ್ನ ಅಪ್ಪಿಕೊಂಡು ತನ್ನದೇ ದಾರಿಯಲ್ಲಿ ಸಾಗಿದ್ದರೆ.ಹೆಚ್ಚು ಸದ್ದು ಮಾಡದೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೋಡಗಿಸಿಕೊಳ್ಳುವುದರ ಜೊತೆಗೆ ಸಿನಿಮಾ ಮಾಧ್ಯಮದ ಮಿತ್ರರ ಎಳಿಗೆಗೆ ನೇರ ಕಾರಣರಾಗಿದ್ದಾರೆ.ಅಭಿಮಾನಿಗಳು ಅವರನ್ನ ಪರದೆಯ ಮೇಲೆ ನಾಯಕನ ಪಾತ್ರದಲ್ಲಿ ನೋಡಿ ಮನಸೋರೆಗೊಂಡಿದ್ದಾರೆ ಅದೇ ಅಭಿಮಾನಿಗಳು ಅವರ ನಿಜ ಜೀವನದ ವ್ಯಕ್ತಿತ್ವ ಕಂಡು ಹೃದಯದೇಗುಲದಲ್ಲಿ ಆರಾಧಿಸುತ್ತಿದ್ದಾರೆ..

ಮೂರು ವಿವಿದ ಕ್ಷೇತ್ರ.. ಮೂರು ಬೇರೆ ತಲೆಮಾರು, ಮೂರು ವಿಭಿನ್ನ ದಿಕ್ಕು ಆದ್ರೆ ಉದ್ದೇಶವೊಂದೇ ” ಸಮಾಜದ ಆರೋಗ್ಯ” ” ಸಮಾಜದ ಆರೈಕೆ” ಈ ಸಂಯೋಚಿತದಿಂದಾಗಿ ಒಂದೇ ವೇದಿಕೆಯಲ್ಲಿ ಸೇರಲಿದೆ ಈ ಚೇತನಗಳು .

ವರದಿ: P. ಘನಶ್ಯಾಮ್ – ಬೆಂಗಳೂರು

