ಬೆಂಗಳೂರು : ಮಾನ್ಯ ವಸತಿ ಸಚಿವರ ವಿಕಾಸಸೌಧದ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೊಳಚೆ ಅಭಿವೃದ್ಧಿ ನಿರ್ಮೂಲನ ಮಂಡಳಿ ನಿರ್ಮಾಣ ಕುರಿತಂತೆ ಸಭೆ.

ಇಂದು ಸಂಜೆ ಮಾನ್ಯ ವಸತಿ ಸಚಿವರ ವಿಕಾಸಸೌಧದ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೊಳಚೆ ಅಭಿವೃದ್ಧಿ ನಿರ್ಮೂಲನ ಮಂಡಳಿಯಿಂದ ಮನೆಗಳ ಹಂಚಿಕೆ ಮತ್ತು ನಿರ್ಮಾಣ ಕುರಿತಂತೆ ಸಭೆ ನಡೆಯಿತು.ಈ ಸಭೆಯಲ್ಲಿ ಶ್ರೀ ಹಾರತಾಳು ಹಾಲಪ್ಪ ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ, ಶ್ರೀಮತಿ ಮಧುರಾ ಶಿವಾನಂದ್ ಸಾಗರ ನಗರ ಸಭೆ ಅಧ್ಯಕ್ಷರು, ಸಾಗರ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಕರ್ನಾಟಕ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಶ್ರೀ ಶಿವಪ್ರಸಾದ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

ವರದಿ: ಹರ್ಷ ಸಾಗರ
