ಸತೀಶ್ ಮೊಗವೀರ ರವರು ಶಿಬಿರ ಗೀತೆ ಹೇಳಿದರು, ಹು ಬಾ ಅಶೋಕ ರವರು ಒಂದೆಮತರುಂ ಗೀತೆ ಹೇಳಿದರು. ದೇವೇಂದ್ರಪ್ಪ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು, ವರ್ಗ ಪ್ರಮುಕ ರಾಮಚಂದ್ರ ಭಟ್ ಶಿಬಿರದ ವರದಿ ನೀಡಿದರು.ಶಾಸಕರು ಸಮಾರೋಪ ನುಡಿ ಹೇಳಿದರು ಲೋಕನಾಥ್ ಅಧ್ಯಕ್ಷತೆ ವಹಿಸಿದರು ,ಬಿ ಎನ್ ನಾಗರಾಜ್ ವಂದಿಸಿದರು, ಗೌತಮ್ ಕೆ.ಎಸ್ ಪ್ರದಾನ ಕಾರ್ಯದರ್ಶಿ ನಿರೂಪಿಸಿದರು.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ತಾ. ವರದಮೂಲದಲ್ಲಿ ಆಯೋಜಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ “ಪ್ರಶಿಕ್ಷಣ ವರ್ಗದ” ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಘ ಪರಿವಾರ ಹಾಗೂ ಪಕ್ಷದ ಹಿರಿಯರು ಈಗಿನ ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸಿ ಕಾಲ ಕಾಲಕ್ಕೆ ಸೂಚನೆಗಳನ್ನು ನೀಡುತ್ತಾರೆ ಅವುಗಳನ್ನು ಕ್ರಮಬದ್ಧವಾಗಿ ಪಾಲಿಸಿ ಕೊಂಡು, ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಎಲ್ಲಾ ಹಂತದಲ್ಲೂ ಪಕ್ಷ ಯಶಸ್ಸು ಕಾಣಲು ಸಾಧ್ಯ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರ ಮತ್ತು ಗ್ರಾ. ಮಂಡಲದ ಅಧ್ಯಕ್ಷರು, ಜಿಲ್ಲಾ ಪ್ರಮುಖರು, ತಾ. ವಿವಿಧ ಮೋರ್ಚಾ, ಪ್ರಕೋಷ್ಟಗಳ ಪ್ರಮುಖರು, ಪದಾಧಿಕಾರಿಗಳು, ಅಪೇಕ್ಷಿತ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
