ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ “ವಿಶೇಷ ಸಭೆ” ಬಗ್ಗೆ “ಪತ್ರಿಕಾಗೋಷ್ಠಿ”.
ದಿನಾಂಕ : 02 ಮತ್ತು 03.01.2021 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ “ವಿಶೇಷ ಸಭೆ” ಬಗ್ಗೆ “ಪತ್ರಿಕಾಗೋಷ್ಠಿ”. ರಾಜ್ಯ ಬಿಜೆಪಿ ಮಾನ್ಯ ಅಧ್ಯಕ್ಷರಾದ ಶ್ರೀ ನಳೀನ್ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಎರಡೂ ದಿನ ಸಭೆಯಲ್ಲಿರುವುದು ವಿಶೇಷತೆ.
ಈ ವಿಶೇಷ ಸಭೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ. ಇದಲ್ಲದೇ ಮಂತ್ರಿ ಮಂಡಲದ ಹಲವು ಸಚಿವರು ಕೂಡಾ ಉಪಸ್ಥಿತರಿರುತ್ತಾರೆ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವಿಭಾಗ ಪ್ರಭಾರಿ, ಸಹ-ಪ್ರಭಾರಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ
ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷರುಗಳು, ವಿವಿಧ ಪ್ರಕೋಷ್ಟಗಳ ರಾಜ್ಯ ಸಂಚಾಲಕರು ರೀತಿಯ ಅತೀ ಗಣ್ಯರು ಆಗಮಿಸುತ್ತಿದ್ದಾರೆ. ಈ ವಿಶೇಷ ಸಭೆಯಲ್ಲಿ ನಮ್ಮ ಸಂಸ್ಕೃತಿಗೆ, ಸಾರ್ವಜನಿಕರಿಗೆ, ಸಂಘಟನೆಗೆ ಪೂರಕವಾದ ನಿರ್ಣಯಗಳು ಮಂಡನೆಯಾಗಲಿವೆ. ಇದರಿಂದ ಬಿಜೆಪಿ ಇನ್ನಷ್ಟು ಜನಪರವಾಗಿ ಬಲಿಷ್ಠವಾಗುವುದು ಎಂಬುದರಲ್ಲಿ ಸಂಶಯವಿಲ್ಲ.

ವರದಿ: ಸಿಸಿಲ್ ಸೋಮನ್
