ಬೆಂಗಳೂರು: ಯಾವ ಪೋಷಕರು ಅನುಕೂಲಕರವಾಗಿದ್ದಾರೆ ಅಂತಹವರು ಶುಲ್ಕ ಪಾವತಿಸಿ. ಫೀಸ್ ಪಾವತಿ ಮಾಡಿದ್ರೆ ಶಿಕ್ಷಕರಿಗೆ ವೇತನ ಕೊಡಲೂ ಅನುಕೂಲವಾಗುತ್ತೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಷ್ಟೇ ಮಹತ್ವವನ್ನು ಖಾಸಗಿ ಶಾಲೆಗಳು ವಹಿಸಿವೆ. ಖಾಸಗಿ ಶಾಲೆ ಬೇಕು ಅಂತ ಇಷ್ಟಪಟ್ಟು, ಕಷ್ಟಪಟ್ಟು ಪೋಷಕರು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ, ಪೋಷಕರಿಗೆ ಆರೋಗ್ಯಕರ ಸಂಬಂಧವಿರಬೇಕು. ಖಾಸಗಿ ಶಾಲಾ ಸಂಘಟನೆ ಜೊತೆ ನಾನು ಮಾತುಕತೆ ನಡೆಸ್ತೇನೆ ಎಂದರು. ಈಗಾಗಲೇ ಖಾಸಗಿ ಶಾಲಾ ಶಿಕ್ಷಕರು ತರಕಾರಿ ಮಾರುವ ದುಸ್ಥಿತಿ ಬಂದಿದೆ. ಪೋಷಕರು ಹಾಗೂ ಶಾಲೆಯ ನಡುವೆ ಸಂಘರ್ಷ ಉಂಟಾಗಬಾರದು.

ವರದಿ: ಸಿಸಿಲ್ ಸೋಮನ್
