ಸಾಗರ: ಯಲಗಳಲೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿವೇಶನದಾರರಿಗೆ ಮೂಲಭೂತ ಸೌಲಭ್ಯಗಳು.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು, KSSIDC ಅಧ್ಯಕ್ಷರಾದ ಕಳಕಪ್ಪ ಬಂಡಿ ಯವರನ್ನು ಭೇಟಿಯಾಗಿ ಸಾಗರ ತಾ. ಯಲಗಳಲೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿವೇಶನದಾರರಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿಲ್ಲ, ಸಂಪೂರ್ಣ ವ್ಯವಸ್ಥೆ ಕಲ್ಪಿಸಿಕೊಟ್ಟ ನಂತರ ನಿವೇಶನದ ಮೌಲ್ಯ ಪಾವತಿಸುವುದಾಗಿ ಅನೇಕ ಬಾರಿ ಮಂಡಳಿಗೆ ಮನವಿ ಮಾಡಿದ್ದರು ಅದನ್ನು ಪರಿಗಣಿಸದೆ ನಿವೇಶನ ರದ್ದತಿ ಮಾಡುವುದಾಗಿ ಹಾಗೂ ಇ. ಎಂ.ಡಿ ಹಣ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ನೀಡಿರುತ್ತಾರೆ.
ಸಾಗರವು ಕೈಗಾರಿಕೋದ್ಯಮದಲ್ಲಿ ಹಿಂದುಳಿದ ತಾಲ್ಲೂಕಾಗಿದ್ದು. ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಸೌಲಭ್ಯ ಒದಗಿಸುವ ಬಗ್ಗೆ ಚರ್ಚಿಸಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಮಂಡಳಿ ಉಪಾಧ್ಯಕ್ಷರಾದ ಎಸ್.ದತ್ತಾತ್ರಿ ಯವರು, ಸಾಗರ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಮಧುರಾ ಶಿವಾನಂದ್, ಉಪಾಧ್ಯಕ್ಷರಾದ ವಿ. ಮಹೇಶ್, ಆಯುಕ್ತರಾದ ನಾಗಪ್ಪ ನವರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
