ಸಾಗರ: ಕರ್ನಾಟಕ ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಆದೇಶದಂತೆ 9-11-2020 ಸಾಗರದ ಗಣಪತಿ ಕೆರೆ ಒತ್ತುವರಿ ಗಡಿ ಗುರುತು ಕಾರ್ಯನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ಬಂಧಿಸಿದಂತೆ ಸಾಗರ ಟೌನ್ನನಲ್ಲಿರುವ ಗಣಪತಿ ಕೆರೆ ಒತ್ತುವರಿ ವಿಚಾರದಲ್ಲಿ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಲಯದ ಡಬ್ಲ್ಯೂ.ಪಿ.ನಂ 6436/2020 ದಿನಾಂಕ 07-10-2020 ರಲ್ಲಿ ನೀಡಿರುವ ಸೂಚನೆಯಂತೆ ದಿನಾಂಕ 11-11 – 2020 ರೊಳಗಾಗಿ ನ್ಯಾಯಾಲಯಕ್ಕೆ ಮೋಜಣಿ ಕಾರ್ಯನಡೆಸಿ ಒತ್ತುವರಿಯ ಬಗ್ಗೆ ವರದಿ ಸಲ್ಲಿಸಲು ಆದೇಶಿಸಿರುತ್ತಾರೆ.

ಆದ್ದರಿಂದ ಶ್ರೀ ಗಣಪತಿ ಕೆರೆ ಒತ್ತುವರಿಯನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರು ಸಾಗರ ರವರು ತಂಡವನ್ನು ರಚಿಸಿಕೊಂಡು ದಿನಾಂಕ 09-11-2020 ರಂದು ಗಣಪತಿ ಕೆರೆ ಒತ್ತುವರಿ ಬಗ್ಗೆ ಮೋಜಣಿ ಕಾರ್ಯ ನಿರ್ವಹಿಸಲಿದ್ದು.ಮಾನ್ಯ ನ್ಯಾಯಾಲಯದ ಆದೇಶದಂತೆ ಮೋಜಣಿ ಕಾರ್ಯ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ತಾವುಗಳು ಖುದ್ದು ಹಾಜರಿರಲು ತಿಳಿಸುತ್ತೆ.

ಮೋಜಣಿ ಕಾರ್ಯ ನಡೆಯುವ ಸಂದರ್ಭದಲ್ಲಿ ತಮ್ಮ ಪ್ರತಿನಿಧಿಗಳನ್ನು ನಿಯೋಜಿಸದೆ ತಾವು ಖುದ್ದು ಹಾಜರಿದ್ದು ಮೋಜಣಿ ಕಾರ್ಯಕ್ಕೆ ಸಹಕರಿಸಲು ಕೋರಿದ ಕರ್ನಾಟಕ ಉಚ್ಚ ನ್ಯಾಯಾಲಯ .


ವರದಿ: ಗೌತಮ್ ಕೆ.ಎಸ್
