ಸಾಗರ: ಸಾಗರದಲ್ಲಿ ದೆಹಲಿ ರೈತ ಚಳುವಳಿ ಬೆಂಬಲಿಸಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸಾಗರದಲ್ಲಿ ಇಂದು ಮುಂದುವರೆದ ದೆಹಲಿ ರೈತ ಚಳುವಳಿ ಬೆಂಬಲಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಹಕ್ರೆ ಮಲ್ಲಿಕಾರ್ಜುನರವರು ಹಾಗೂ ಮಾಜಿ ನಗರ ಸಭಾ ಸದಸ್ಯರಾದ ಜಂಬಗಾರು ರವಿಯವರು ಬೆಂಬಲ ವ್ಯಕ್ತಪಡಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ಕುಗ್ವೆ ಶಿವಾನಂದ, ಎನ್.ಡಿ ವಸಂತಕುಮಾರ್, ದುರ್ಗಪ್ಪ ಕೆಲುವೆ, ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
