ಸಾಗರ: ಸಾಗರ ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಘಟಕದ ಅಧ್ಯಕ್ಷರಾಗಿ ಕೆ.ಅಜೀಮ್ ಆಯ್ಕೆಯಾಗಿದ್ದಾರೆ.

ಮಾನ್ಯ ಮಾಜಿ ಸಚಿವರು ನಮ್ಮೆಲ್ಲರ ನೆಚ್ಚಿನಾಯಕರಾದ ಕಾಗೋಡು ತಿಮ್ಮಪ್ಪನವರು ಹಾಗು ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ಆದೇಶದ ಮೇರೆಗೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ, ಆರ್ ಜಯಂತ್, ಹಾಗು ನಗರಾಧ್ಯಕ್ಷರಾದ ಐ,ಎನ್, ಸುರೇಶ್ ಬಾಬು ಅವರ ಉಪಸ್ಥಿತಿಯಲ್ಲಿ ಸಾಗರ ತಾಲ್ಲೂಕು ಅಲ್ಪಸಂಖ್ಯಾತ ವಿಭಾಗದ ಘಟಕದ ಅಧ್ಯಕ್ಷರಾಗಿ ಕೆ. ಅಜೀಮ್ ಅವರನ್ನು ಜಿಲ್ಲಾಧ್ಯಕ್ಚರಾದ ಸುಂದರೇಶ್ ಅವರು ನಿಯೋಜನೆ ಮಾಡಿ ಆದೇಶ ಪ್ರತಿಯನ್ನು ಕಾಗೋಡು ತಿಮ್ಮಪ್ಪನವರು ನೀಡಿದರು .

ಈ ಸಂಧರ್ಭದಲ್ಲಿ ನಗರಸಭಾ ಸದಸ್ಯರು, ನಗರಸಭಾ ವಿರೋಧ ಪಕ್ಷದ ನಾಯಕರು ಆದ ಗಣಪತಿ ಮಂಡಗಳಲೆ,ನಗರ ಸಮಿತಿಯ ಪ್ರಧಾನಕಾರ್ಯದರ್ಶಿಗಳಾದ ಪ್ರವೀಣ್ ಬಣಕಾರ , ರಫೀಕ್ ಬಾಬ್ ಜಾನ್, ತನ್ವೀರ್, ಕಬೀರ್ ಚಿಪ್ಳಿ, ಅಬ್ಬಾಸ್ ಸದ್ದಾಂ, ತಬ್ರೇಜ್, ಹಾಗು ಹಲವುಮುಖಂಡರು ಉಪಸ್ಥಿತರಿದ್ದು ಶುಭಕೋರಿದರು.

ವರದಿ: ಹರ್ಷ ಸಾಗರ
