ಸಾಗರ: ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ಶಾಸಕರಾದ ಹೆಚ್.ಹಾಲಪ್ಪ.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ, “ಸೆಂಟ್ರಲ್ ಆಕ್ಸಿಜನ್ ಗ್ಯಾಸ್ ಪೈಪ್ ಲೈನ್” ನಲ್ಲಿ ಸೋರಿಕೆ ಕಂಡು ಬರುತ್ತಿರುವುದನ್ನು ಪರಿಶೀಲಿಸಿ ಕಳಪೆ ಕಾಮಗಾರಿ ನೆಡೆಸಿರುವ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡದಂತೆ, ಆರೋಗ್ಯ ಸಚಿವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳು, ಮುಖ್ಯ ಅಭಿಯಂತರರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ನಂತರ
ಆಸ್ಪತ್ರೆಗೆ MSIL ವತಿಯಿಂದ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸ್ಥಳ ಪರಿಶೀಲಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ವರದಿ: ದಿವ್ಯ ಸಿಸಿಲ್
