ಸಾಗರ: ಸಾಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಸಾಗರ ತಾಲ್ಲೂಕಿನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಸದ್ಗುರು ಸಂತೋಷ್ ಅವರಿಗೆ ಅಭಿನಂದನೆಗಳು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಹಾಗೂ ಸಾಗರ ತಾಲೂಕು ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷರಾದ ರಮೇಶ್ ಮರಸ ಅವರ ಆದೇಶದ ಮೇರೆಗೆ ಸನ್ಮಾನ್ಯ ಕಾಗೋಡು ತಿಮ್ಮಪ್ಪ ನವರ ಮತ್ತು ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ರವರ ಸಲಹೆಯ ಮೇರೆಗೆ ಸಾಗರ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದ ಸುರೇಶ್ ಬಾಬು ಅವರ ಸಹಕಾರದೊಂದಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಆರ್ ಜಯಂತ್ ಅವರು ಸದ್ಗುರು ಸಂತೋಷ್ ಅವರನ್ನು ಸಾಗರ ನಗರ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರ ನ್ನಾಗಿ ಪ್ರಮಾಣ ಪತ್ರ ನೀಡಿ ಘೋಷಣೆ ಮಾಡಿದರು.
ಈ ಸಮಯದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕರಾದ ನಾಗರಾಜ ಸ್ವಾಮಿ, ಸಾಗರ ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಮೇಶ್ ಚಂದ್ರಗುತ್ತಿ, ರವಿ ಜಂಬೂರುಮನೆ, ಯುವ ಕಾಂಗ್ರೆಸ್ ಕಿರಣ್ ದೊಡ್ಮನೆ, ಮನು ಜಾಜಿ ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ
