ಅವರ ಭಾಷಣದ ಸಂಗ್ರಹ:
ಪಾಲಕ್ಕಾಡ್: “ಸಂಘದ ಶಾಖೆಗಳ ಮೂಲಕ ಒಳ್ಳೆಯ ಸಂಸ್ಕಾರ ಸಿಗುತ್ತದೆ, ಆ ಸಂಸ್ಕಾರವು ಸಮಾಜದಲ್ಲಿ ಸ್ವಯಂ ಸೇವಕರ ನಡವಳಿಕೆಯಲ್ಲಿ ಪ್ರತಿಫಲಿಸುತ್ತದೆ. ಮಹಿಳೆಯರ ಕುರಿತು ಸಂಘದ ಸ್ವಯಂ ಸೇವಕರಿಗೆ ಇರುವ ಸದ್ಭಾವನೆ ಇನ್ನಿತರ ಯಾವುದೇ ಸಂಘಟನೆಯಲ್ಲಿ ಕಾಣ ಸಿಗದು. ಇಂಥ ಸುಗುಣ, ಸಚ್ಛಕ್ತಿ ಯನ್ನು ಶಾಖೆಯ ಚಟುವಟಿಕೆಗಳ ಮೂಲಕ ಮೈಗೂಡಿಸಿ ಕೊಳ್ಳುತ್ತಾರೆಂದು ತಿಳಿದಾಗ ನನಗೆ ಸಂಘದ ಮೇಲಿನ ಅಭಿಮಾನ ದ್ವಿಗುಣವಾಯಿತು. ಒಬ್ಬ ಸ್ವಯಂಸೇವಕ ಇರುವ ಮನೆ ಆತ ಇರುವ ಇಡೀ ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ. ನಾನು ಪಾಲಿಸುವ ಧರ್ಮ ಬೇರೆಯದಿರಬಹುದು ಆದರೆ ನನ್ನ ಮೂಲ ಈ ಮಣ್ಣಿನದೇ. ನಾನು ಭಾರತಮಾತೆಯ ಪುತ್ರಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಭಾರತ್ ಮಾತಾ ಕೀ ಜೈ”

ವರದಿ: ಗೌತಮ್ ಕೆಎಸ್
