ಶಿವಮೊಗ್ಗ: ಸಂಸದರಾದ ಬಿ.ವೈ.ರಾಘವೇಂದ್ರ ರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು, ಸಂಘದ ಪ್ರಥಮ ವಕ್ತಾರರು ಹಾಗೂ ಮಹಾನ್ ಸಂಸ್ಕೃತ ಪಂಡಿತರಾದ ಶ್ರೀ ಮಾಧವ್ ಗೋವಿಂದ ವೈದ್ಯ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು, ಸಂಘದ ಪ್ರಥಮ ವಕ್ತಾರರು ಹಾಗೂ ಮಹಾನ್ ಸಂಸ್ಕೃತ ಪಂಡಿತರಾದ ಶ್ರೀ ಮಾಧವ್ ಗೋವಿಂದ ವೈದ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂಸದರಾದ ಬಿ.ವೈ.ರಾಘವೇಂದ್ರ ರವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ವರದಿ: ಸಿಸಿಲ್ ಸೋಮನ್
