ಕೇಂದ್ರದ ಸ್ಪೋರ್ಟ್ಸ್ ಮಿನಿಸ್ಟರ್ ಕಿರಣ್ ರಿಜೀಜು ಸ್ಪಷಲ್ ಏರಿಯಾ ಗೇಮ್ ಕ್ಲೋಸ್ ಆಗಿದ್ದು, ಈಗ ಖೇಲೋ ಇಂಡಿಯಾ ಪ್ರಾಜೆಕ್ಟ್ ಅಡಿಯಲ್ಲಿ 30 ಎಕರೆ ಜಾಗದಲ್ಲಿ ಹೊಸ ಸ್ಟೇಡಿಯಂ ರಚನೆ ಆಗಿತ್ತಿದೆ ಎಂದು ಸಂಸದರಾದ ಶ್ರೀಯುತ ಬಿ.ವೈ.ರಾಘವೇಂದ್ರರವರು ತಿಳಿಸಿದರು.
ಈ ಕ್ರೀಡಾಂಗಣಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆಗಲಿದೆ. ತಾವರೆಕೊಪ್ಪ ಸಿಂಹಧಾಮದ ಎದುರು ನಿರ್ಮಾಣಗೊಳ್ಳುತ್ತಿದೆ. ಎಂದು ಈ ಕುರಿತು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸರ್ವೆ ನಂಬರ್ 50ರಲ್ಲಿ 166 ಎಕರೆ 36 ಗುಂಟೆ ಇದೆ. ಇದರಲ್ಲಿ 30 ಎಕರೆಯನ್ನ ಕ್ರೀಡಾ ಪ್ರಾಧಿಕಾರಕ್ಕೆ ಬಿಟ್ಟುಕೊಡಲಾಗುವುದು ಎಂದರು.
ಅಥ್ಲೆಟಿಕ್ಸ್, ಫುಟ್ ಬಾಲ್, ವಾಲಿಬಾಲ್, ಹಾಕಿ ಊಷೋ, ಜ್ಯೂಡೋ, ಕುಸ್ತಿ, ಕಬ್ಬಡಿ ಮತ್ತು ಖೋಖೋ ರಚನೆ.
ಮಿ.ಸುರೇಶ್, ಅಶುತೋಷ್ ಗರ್ ಮೊದಲಾದ ನಾಲ್ವರು ತಂಡ ಇಂದು ಶಿವಮೊಗ್ಗಕಕ್ಕೆ ಭೇಟಿ ನೀಡಿದ್ದಾರೆ,ಇವರೊಂದಿಗೆ ಜಿಲ್ಲಾಧಿಕಾರಿ ಶ್ರೀ ಶಿವಕುಮಾರ್ ಜೊತೆಯಲ್ಲಿದ್ದರು. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹತ್ತಿರವಾಗಲಿದೆ. ತಾತ್ಕಲಿಕವಾಗಿ ವಸತಿ ನಿಲಯವೂ ಜಾರಿಗೊಳ್ಳುತ್ತಿದೆ ಎಂದರು ಜ್ಯೂನಿಯರ್ ಹಾಕಿ ನಿರ್ಮಾಣ ನೆಹರೂ ಕ್ರೀಡಾಂಗಣದಲ್ಲಿ ಹಾಕಿ ಕ್ರೀಡಾಂಗಣ ರಚನೆ ಕುರಿತು ಆಕ್ಷೇಪಣೆ ಇತ್ತು. ಆದರೆ ಇದರ ಕುರಿತು ಪರಿಶೀಲಿಸಿ ನೆಹರೂ ಕ್ರೀಡಾಂಗಣದಲ್ಲಿ ಜ್ಯೂನಿಯರ್ ಹಾಕಿ ಕ್ರೀಡಾಂಗಣ ರಚನೆ ಆಗಲಿದ್ದು ತ್ಯಾವರಕೊಪ್ಪದಲ್ಲಿ ಸೀನಿಯರ್ ಹಾಕಿ ಮೈದಾನವಾಗಿ ರಚಿಸಲಾಗಿದೆ ಎಂದು ಸಂಸದರಾದ ಶ್ರೀಯುತ ಬಿ.ವೈ.ರಾಘವೇಂದ್ರರವರು ತಿಳಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಸುವರ್ಣ ಶಂಕರ್,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್,ಸಣ್ಣ ಕೈಗಾರಿಕಾ ನಿಗಮದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ,ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ ಪುರುಶೋತ್ತಮ್, ಉಪಮೇಯರ್ ಶ್ರೀಮತಿ ಸುರೇಖ ಮುರಳೀಧರ್ ರಾವ್,ಪಾಲಿಕೆ ಸದಸ್ಯರಾದ ಶ್ರೀ ಚನ್ನಬಸಪ್ಪ,ಶ್ರೀ ಜ್ಞಾನೇಶ್ವರ ಮತ್ತು ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ: ಗೌತಮ್ ಕೆ.ಎಸ್
