ನಂಜನಗೂಡು: ನಂಜನಗೂಡಿನ ರಸಬಾಳೆ ವಿಶಿಷ್ಟ ರುಚಿಗೆ ಹೆಸರುವಾಸಿ
ನಂಜನಗೂಡಿನ ರಸಬಾಳೆ ವಿಶಿಷ್ಟ ರುಚಿಗೆ ಹೆಸರುವಾಸಿ. ನಂಜನಗೂಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಈ ಬಾಳೆಹಣ್ಣು ಉತ್ತಮ ಪೌಷ್ಠಿಕಾಂಶ ಹೊಂದಿರುವ ಫಲ. ಜಿಐ ಟ್ಯಾಗ್ ಹೊಂದಿರುವ ಈ ಉತ್ಪನ್ನದ ಕಿರು ಪರಿಚಯ ಇಲ್ಲಿದೆ.
ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ರಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸುವಾಸನೆ ಬದಲಾಗಿದೆ. .[೧][೨][೩] ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡಿ[೪] ನ ಮೂಲಕ ಇದು ಕನ್ನಡ ಸಾಹಿತ್ಯ ಲೋಕದಲ್ಲೂ ಪ್ರಸಿದ್ದವಾಗಿದೆ.

ವರದಿ: ಸಿಸಿಲ್ ಸೋಮನ್
