ಸಾಗರ: ನಿಮ್ಮ ಜೀವನದಲ್ಲಿ ನಾನೊಬ್ಬ ದಾರಿಹೋಕ; ನಿಮ್ಮ ಪಯಣದಲ್ಲಿ ನಾನಾಗಬೇಕಿದೆ ಭವಿಷ್ಯದ ನಾವಿಕ – ಹರತಾಳು ಹಾಲಪ್ಪ.

(490 ಲಕ್ಷ ರೂ ವೆಚ್ಚದ, ಸಾಗರ ತಾ. ಹುಲಿದೇವರಬನ ದಿಂದ ಪಟಗುಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪ್ರಗತಿಯಲ್ಲದೆ.)
ಸ್ವತಃ ಮುಳುಗಡೆ ಸಂತ್ರಸ್ತ ರೈತ ಕುಟುಂಬದವನಾದ ನನಗೆ, ಅಲ್ಲಿನ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿವಿದೆ.

1964 ರಲ್ಲಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣವಾದಾಗ ಮಡೆನೂರು ಡ್ಯಾಂ ಮುಳುಗಡೆಯಾಗಿ ಆ ಭಾಗದ ಜನರಿಗೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
2004 ರಲ್ಲಿ ಹೊಸನಗರ ಕ್ಷೇತ್ರದ ಶಾಸಕನಾದಾಗ ಪಟಾಗುಪ್ಪ ಸೇತುವೆ ಕಾಮಗಾರಿಗೆ ವರದಿ ತಯಾರಿಸಲಾಗಿತ್ತು. 2007-08 ರಲ್ಲಿ ಕಾಮಗಾರಿಗೆ ಅನುಮೋದನೆ ದೊರಕಿತು. ತಾಂತ್ರಿಕ ಸಮಸ್ಯೆಗಳು, ಕೆಲವರ ಇಚ್ಛಾಶಕ್ತಿಯ ಕೊರತೆ ಇಲ್ಲಿಗೆ ಒಂದೂವರೆ ದಶಗಳ ನಂತರ ಸೇತುವೆ ಕಾಮಗಾರಿ ಪೂರ್ಣಗೊಂಡು #ಉದ್ಘಾಟನೆ ಗೆ ಸಜ್ಜಾಗಿದೆ. ಸೇತುವೆ ಪೂರ್ಣಗೊಂಡರು ಸಂಪರ್ಕ ರಸ್ತೆ ಕಾಮಗಾರಿ ನೆಡೆದಿರಲಿಲ್ಲ. ಈಗ 490 ಲಕ್ಷ ವೆಚ್ಚದಲ್ಲಿ ಹುಲಿದೇವರಬನ ಪಟಗುಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಈ ಸೇತುವೆಯಿಂದ ಪಟಗುಪ್ಪ, ಕಾಳಿಕಾಪುರ, ಸಂಕೂರು, ದುಮ್ಮ, ಜಬಗೋಡು, ವೀರಭದ್ರಾಪುರ, ಮಸಗಲ್ಲಿ ಮೊದಲಾದ ಗ್ರಾಮಗಳು ಸಾಗರ ತಾ. ಹುಲಿದೇವರಬನ ಮೂಲಕ ಸಾರಿಗೆ ಸಂಪರ್ಕಕ್ಕೆ ಹತ್ತಿರವಾಗಲಿವೆ.
ಇಷ್ಟು ಕಾಲ ಜನರು ಅನುಭವಿಸಿದ ತೊಂದರೆಗಳಿಗೆ ಕ್ಷಮೆಯಾಚಿಸುತ್ತಾ ತಮ್ಮ ಆಶೀರ್ವಾದ ಬೇಡುತ್ತೇನೆ.

ವರದಿ: ಸಿಸಿಲ್ ಸೋಮನ್
