
ಇಂದು (21-10-2020) MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ ರವರನ್ನು ಭೇಟಿ ಮಾಡಿ
ಸಾಗರ-ಜಂಬಗಾರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಸುಸಜ್ಜಿತ ನಿಲ್ದಾಣವನ್ನು (ಪ್ಲಾಟ್ ಫಾರಂ) ನಿರ್ಮಿಸಲು ಅನುದಾನ ಒದಗಿಸುವಂತೆ, ಕೆಂಚನಾಳ ಗ್ರಾ.ಪಂ ಮಸರೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ, ಅರಸಾಳು (ಮಾಲ್ಗುಡಿ) ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೌಲಭ್ಯವನ್ನು ಕಲ್ಪಿಸಲು ಎಕ್ಸ್ಪ್ರೆಸ್ ರೈಲುಗಳನ್ನು ನಿಲುಗಡೆಗೊಳಿಸು ಬಗ್ಗೆ ಹಾಗೂ ರೈಲ್ವೆ ಅಂಡರ್ ಪಾಸ್ ಗಳ ದುರಸ್ಥಿ ಬಗ್ಗೆ ಚರ್ಚಿಸಿದರು.
ಮುಖ್ಯಮಂತ್ರಿಗಳ ರೈಲ್ವೆ ಸಲಹೆಗಾರ ಶ್ರೀಧರಮೂರ್ತಿ, ನೈಋತ್ಯ ರೈಲ್ವೆಯ ವಿಭಾಗೀಯ ಸಹಾಯಕ ಅಭಿಯಂತರ ಟಿ.ಆರ್.ಬಗಾಡೆ, ಮತ್ತಿತರರು ಉಪಸ್ಥಿತರಿದ್ದರು.

By: Gowtham K S, Sagara
