ಹರತಾಳು: ಭೂಮಿ ತಾಯಿ ಮಡಿಲು ಹಸಿರಿನಿಂದ ಕಂಗೊಳಿಸಿದಾಗಲೇ, ಅದರಲ್ಲಿಸಕಲ ಜೀವರಾಶಿಗಳು ಕಣ್ಣರಳಿಸಿ ಬದುಕಲು ಸಾಧ್ಯ. ಹಸಿರು ಇಲ್ಲದೇ ಹೋದರೆ ಈ ಜಗತ್ತೇ ಬೆಂಗಾಡು. ಬದುಕೇ ಶೂನ್ಯ. ಅದಕ್ಕೇ ನಿಸರ್ಗದ ಮಹತ್ವ ಸಾರುವ ಶೀಗಿ ಹುಣ್ಣಿಮೆಯಂಥ ಪ್ರಕೃತಿ ಆಧಾರಿತ ಆಚರಣೆಗಳು ನಮಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಅರ್ಥವಾಗಬೇಕಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಅನಿವಾರ್ಯತೆಯೂ ಇದೆ.
MSIL ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಗ್ರಾಮದಲ್ಲಿ ಕುಟುಂಬಸ್ಥರೊಂದಿಗೆ ಭೂಮಿಹುಣ್ಣಿಮೆ ಆಚರಿಸಿದರು.

ವರದಿ: ಸಿಸಿಲ್ ಸೋಮನ್
