ಮಂಗಳೂರು: ಮಂಗಳೂರು 13 ನೇ “ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ”.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಮಂಗಳೂರಿನಲ್ಲಿ ನೆಡೆದ 13 ನೇ “ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ” ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ತುಳು ಸೇರಿದಂತೆ ನಾಲ್ಕೈದು ಭಾಷೆಗಳನ್ನು ಮಾತನಾಡುತ್ತಾರೆ.ಇದರ ಮಧ್ಯ ಕನ್ನಡವನ್ನು ಶುದ್ದವಾಗಿ ಆಡುತ್ತಾರೆ. ಇಲ್ಲಿನ ಯಕ್ಷಗಾನ ಕಲೆಯಲ್ಲಿ ಕನ್ನಡವನ್ನು ಶುದ್ದವಾಗಿ ಬಳಸಲಾಗುತ್ತದೆ. ಇದರಿಂದ ಕನ್ನಡದ ಶ್ರೀಮಂತಿಕೆ ಹೆಚ್ಚಿದೆ. ಶಿವಮೊಗ್ಗ, ಹಾಸನ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇವಲ ಕನ್ನಡವನ್ನು ವಿಶೇಷವಾಗಿ ಅಚ್ಚ ಕನ್ನಡವನ್ನು ಮಾತನಾಡುತ್ತಾರೆ.
ಸಾಗರದ ಮೂಲದವರಾದ ಮಂಜುನಾಥ್ ಸಾಗರ್ ನೇತೃತ್ವದಲ್ಲಿ ಹೊರ ರಾಜ್ಯಗಳು ಸೇರಿದಂತೆ ಬೇರೆ ದೇಶಗಳಲ್ಲಿ ಇಂತಹ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ಸಂಸ್ಕೃತಿಯನ್ಬು ಎತ್ತಿ ಹಿಡಿಯುವ ಜತೆಗೆ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು, ದೂರದರ್ಶನ ವಾಹಿನಿಯ ನಿವೃತ್ತ ಮಹಾ ನಿರ್ದೇಶಕ ನಾಡೋಜ ಮಹೇಶ್ ಜೋಶಿ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜಿ.ಎ.ಬಾವಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
